Haridasa Sahitya — Vyasadasa

Guru raayara nambiro

ಗುರುರಾಯರ ನಂಬಿರೋ |

Composer: Haridasa · Deity: Raghavendra Teertharu · Genre: Dasara Pada

Kannada lyrics

ಗುರುರಾಯರ ನಂಬಿರೋ | ರಾಘವೇಂದ್ರ ಗುರುರಾಯರ ನಂಬಿರೋ || ಪ || ಗುರುರಾಯರ ನಂಬಿ | ದುರಿತ ದುಷ್ಕೃತ ಹರಿಸಿ ಪುರುಷಾರ್ಥ ಪರಮವ ಕರಗತ ಕೈಗೊಳ್ಳಿ || ಅಪ|| ಪರಿಮಳೇತ್ಯಾದಿ ಸಂದ್ಗ್ರಂಥ | ವಿರಚಿಸಿ ಪರಮೋಚ್ಚಪ್ರದವೆನಿಸುವಂಥ | ಎರಡೆರಡ್ಹತ್ತು ಮತ್ತೆ | ಎರಡೈದು ಗ್ರಂಥವ ಧರಣಿ ಸುರರಿಗಿತ್ತು | ಕರುಣವ ತೋರಿದ || 1 || ರಾಮಕೃಷ್ಣ ನರಹರೀ | ವೇದವ್ಯಾಸ ಮಾಮನೋಹರ ವೃಂದಾವನದಿ ವಾಮಾಂಗ ಎನಿಸೀಹ | ಶ್ರೀಮಹಿಳೆಸಹಿತಾಗಿ ಕಾಮಿತಾರ್ಥದ ಹರಿ | ನೇಮದಿ ನೆಲಸೀಹ || 2 || ಕೂಸೆರಡರ ದಯದೀ | ಮಂತ್ರಾಲಯ ದೇಶಕೆ ಪೋಗಿ ಮುದದೀ | ಲೇಸು ಸೇವೆಯ ಗೈಯ್ಯೆ | ಕಾಸರೋಗವನೀಗಿ ಮೇಶ ಗುರುಗೋವಿಂದ | ದಾಸನ್ನಾಗಿಸಿದ || 3 ||

Transliteration

Gururayara nambiro | raghavendragururayara nambiro || Padurita dushkrata harisipurushartha paramava karagata kaigolli || a.pa.|| Parimaletyadi sandgrantha | viracisivaramoksha pradavenisuvantha | Eraderad~hattu matte | eradaidu granthavadharani surarigittu | karunava torida ||1|| Ramakrushna narahari | vedavyasamamanohara vrundavanadivamanga enisiha | srimahilesahitagikamitarthada hari | nemadi ne…