Haridasa Sahitya — Vyasadasa

Tirthakshetra Sulaadi 38 — Ahobila narasimha deva sulaadhi

ಸುಳಾದಿ ೩೮ — ಅಹೋಬಲ ನರಸಿಂಹದೇವರ ಸುಳಾದಿ

Composer: Gopala Dasaru · Deity: Narasimha · Genre: Sulaadi

Kannada lyrics

ಅಹೋಬಿಲ ನರಸಿಂಹದೇವರ ಸುಳಾದಿ ರಾಗ ಮೋಹನ ಧ್ರುವತಾಳ ಅನಂತನ್ನ ನೋಡಿ ಅಗಣಿತ ಗುಣಗಣನ ಅನಂತನ್ನ ಪಾಡಿ ಆಗಮಾದಿ ನುತನ ಅನಂತನ್ನ ಬೇಡಿ ಅನಿಮಿತ್ಯ ಬಾಂಧವನ ಅನಂತನ್ನ ತಿಳಿ ಅಧಿಕಾರಾನುಸಾರ ಅನಂತ ಜನರ ಪೊರೆವಾ ಅನಂತ ರೂಪನಾಗಿ ಅನಂತನೇವೆ ಅಹೋಬಲ ನಾರಸಿಂಹನಾಗಿ ಅನಂತ ಪರಿಯಾ ತುತಿಪೊ ಆ ಮಾರ್ಕಾಂಡೇಯ ಗೊಲಿದು ಅನಂತ ಮೂರ್ತಿ ತೋರಿ ಆತನ ವ್ರತವ ಗೆಲಿಸಿ ಅನಂತ ಸಿರಿ ಅಜಭವಾದ್ಯರಿಂದಲಿನ್ನು ಅನಂತ ಪರಿಯಲ್ಲಿ ಸ್ಮರಿಸಿ ಕೊಳುಖತಲಿಪ್ಪ ಆನಂತ ಗಿರಿವಾಸ ಗೋಪಾಲವಿಟ್ಠಲ ಅನಂತ ನಿಂದಲಿ ಅನಂತತೀರ್ಥ ಉಂಟು II 1 ಮಟ್ಟತಾಳ ಭವನಾಶನ ಮಾಳ್ವಾ ಭಾಗೀರಥಿ ಜನಕ ಭವನಾಶಿನಿ ತೀರ್ಥದಲ್ಲಿ ತಾನೆ ನಿಂದು ಅವನಿಯೊಳಗೆ ಒಬ್ಬ ಚಂಡ ಶಾಸನನು ಎಂ - ಬವನು ತಾ…