Haridasa Sahitya — Vyasadasa

Gopala dasa raaya ninnaya pada

ಗೋಪಾಲ ದಾಸರಾಯ ನಿನ್ನಯ ಪಾದ

Composer: Jagannatha Dasaru · Deity: Gopala Dasaru · Genre: Dasara Pada

Kannada lyrics

ಗೋಪಾಲ ದಾಸರಾಯ ನಿನ್ನಯ ಪಾದ ನಾ ಪೊಂದಿದೆನೊ ನಿಶ್ಚಯ|| ಪ|| ಈ ಪೀಡಿಸುವ ತ್ರಯತಾಪಗಳೋಡಿಸಿ ಕೈ ಪಿಡಿದೆÀನ್ನ ಕಾಪಾಡಿದ ಗುರುರಾಯ ||ಅ.ಪ|| ಘೋರ ವ್ಯಾಧಿಯನೆ ನೋಡಿ | ವಿಜಯರಾಯ ಭೂರಿ ಕರುಣವ ಮಾಡಿ ತೋರಿದರಿವರೆ ಉದ್ಧಾರಕರೆಂದಂದಿ ನಾರಭ್ಯ ತವ ಪಾದ ಸಾರಿದೆ ಸಲಹೆಂದು || ಸೂರಿಜನ ಸಂಪ್ರೀಯ ಸುಗುಣೋದಾರ ದುರುಳನ ದೋಷ ನಿಚಯವ ದೂರಗೈಸಿ ದಯಾಂಬುನಿಧೆ ನಿ ವಾರಿಸದೆ ಕರಪಿಡಿದು ಕರುಣದಿ ಅಪ ಮೃತ್ಯುಯವನು ತಂದೆ ಎನ್ನೊಳಗಿದ್ದ ||1|| ಅಪರಾಧಗಳ ಮರೆದೆ ಚಪಲ ಚಿತ್ತನಿಗೊಲಿದು ವಿಪುಲ ಮತಿಯನಿತ್ತು ನಿಪುಣನೆಂದೆನಿಸಿದೆ ತಪಸಿಗಳಿಂದಲಿ ಕೃಪಣ ವತ್ಸಲ ನಿನ್ನ ಕರುಣೆಗೆ ಉಪಮೆಗಾಣೆನೊ ಸಂತತವು ಕಾ ಶ್ಯಪಿಯೊಳಗೆ ಬುಧರಿಂದ ಜಗದಾ ಧಿಪನ ಕಿಂಕರನ…

Transliteration

Gopaladasaraya ninnaya pada Na pondideno niscaya || pa || I pidisuva trayatapagalodisi Kaipididenna kapadida gururaya || a.pa || Goravyadhigala nodi vijayaraya Burikarunava madi Toridavare uddharakarendandi- Narabya tavapada seride salahendu Suri janasampriya suguno- Dara durulana doshanicayava Duragaisi dayambunidhe ni- Varisade karapididi karunadi ||1 || Apamrutyuvanu taridi ennolagidda Aparadha…