Haridasa Sahitya — Vyasadasa
Gopala dasa raaya mampaalaya
ಗೋಪಾಲದಾಸರಾಯ ಮಾಂಪಾಲಯ
Composer: Gopala Dasaru · Deity: Gopala Dasaru · Genre: Dasara Pada
Kannada lyrics
ಗೋಪಾಲದಾಸರಾಯ ಮಾಂಪಾಲಯ || ಗೋಪಾಲದಾಸರಾಯಾ ಅಪಾರ ಮಹಿಮ ಮ- ತ್ಪಾಪಗಳೋಡಿಸಿ ಕಾಪಾಡೊ ಗುರುರಾಯ||a.pa|| ಗಜಮುಖ ನಮಿಸುವೆ ಸುಜನ ಪಾಲಕ ಶ್ರೀಮದ್ ಸುಜನ ವಿಜಯದಾಸರಿಗೆ ನಿಜ ಶಿಷ್ಯರೆನಿಸಿದ ||1|| ಧನ್ವಂತ್ರಿ ಜಪದಿ ಜಗನ್ನಾಥದಾಸರ ಬನ್ನವ ಬಿಡಿಸಿದ ಘನ್ನ ಮಹಿಮಗುರು ||2|| ಏನು ಕರುಣವೋ ಶ್ರೀ ಮಾನವಿ ದಾಸರಿಗೆ ಸಾನುರಾಗದಿ ಆಯುರ್ದಾನವ ಮಾಡಿದ ||3|| ಪದುಮನಾಭನ ಪದಪದುಮ ಮಹಿಮೆಗಳ ವಿಧ ವಿಧ ಪದಸುಳಾದಿಗಳಿಂದ ತುತಿಸಿದ ||4|| ಶರಣು ಜನಕೆ ಸುರತರುವೆನಿಸಿ ಧರೆಯೊಳು ಮೆರೆವ ‘ ಕಾರ್ಪರ ನರಹರಿ’ ಯ ನೊಲಿಸಿದಂಥ||5|| Gopaladasaraya mampalaya ||
Transliteration
Gopaladasaraya apara mahima ma- Tpapagalodisi kapado gururaya||a.pa|| Gajamuka namisuve sujana palaka srimad Sujana vijayadasarige nija sishyarenisida ||1|| Dhanvamtri japadi jagannathadasara Bannava bidisida Ganna mahimaguru ||2|| Enu karunavo sri manavi dasarige Sanuragadi ayurdanava madida ||3|| Padumanabana padapaduma mahimegala Vidha vidha padasuladigalinda tutisida ||4|| Saranu janake surata…