Haridasa Sahitya — Vyasadasa

Gollathiyarella koodi

ಗೊಲ್ಲತಿಯರೆಲ್ಲ ಕೂಡಿ

Composer: Sripadarajaru · Deity: Krishna · Genre: Dasara Pada

Kannada lyrics

ಗೊಲ್ಲತಿಯರೆಲ್ಲ ಕೂಡಿ ಎನ್ನ ಮೇಲೆ ಇಲ್ಲದ ಸುದ್ದಿ ಪುಟ್ಟಿಸಿ ಕಳ್ಳನೆಂದು ದೂರುತಾರೆ ಗೋಪಿ ಎನ್ನ ಕೊಲ್ಲಬೇಕೆಂಬ ಬಗೆಯೆ ||ಪ|| ಹರವಿಯ ಹಾಲು ಕುಡಿಯಲು ಎನ್ನ ಹೊಟ್ಟೆ ಕೆರೆಯೇನೆ ಹೇಳಮ್ಮಯ್ಯ ಕರೆದು ಅಣ್ಣನ ಕೇಳಮ್ಮ ಉಂಟಾದರೆ ಒರಳಿಗೆ ಕಟ್ಟಮ್ಮಯ್ಯ ||೧|| ಮೀಸಲು ಬೆಣ್ಣೆಯನು ಮೆಲುವುದದು ಎನಗೆ ದೋಷವಲ್ಲವೇನಮ್ಮಯ್ಯ ಆಸೆ ಮಾಡಿದರೆ ದೇವರು ಕಣ್ಣ ಮೋಸದಿ ಕುಕ್ಕೋನಮ್ಮಯ್ಯ ||೨|| ಅಟ್ಟವನೇರಿ ಹಿಡಿವುದು ಅದು ಎನಗೆ ಕಷ್ಟವಲ್ಲವೆ ಹೇಳಮ್ಮಯ್ಯ ನೀ ಕೊಟ್ಟ ಹಾಲು ಕುಡಿಯಲಾರದೆ ನಾನು ಬಟ್ಟಲೊಳಗಿಟ್ಟು ಪೋದೆನೆ ||೩|| ಪುಂಡುತನ ಮಾಡಲು ನಾನು ದೊಡ್ಡ ಗಂಡಸೇನೆ ಹೇಳಮ್ಮಯ್ಯ ಎನ್ನ ಕಂಡವರು ದೂರುತಾರೆ ಗೋಪಮ್ಮ ನಾ ನಿನ್ನ ಕಂದನಲ್ಲವೇನೆ…

Transliteration

Haraviya halu kudiyalu enna hotte Kereyene helammayya Karedu annana kelamma untadare Oralige kattammayya ||1|| Misalu benneyanu meluvudadu enage Doshavallavenammayya Ase madidare devaru kanna Mosadi kukkonammayya ||2|| Attavaneri hidivudu adu enage Kashtavallave helammayya ni Kotta halu kudiyalarade nanu Battalolagittu podene ||3|| Pundutana madalu nanu dodda Gandasene helammayya enna Kandavaru du…