Haridasa Sahitya — Vyasadasa
Gokuladholu ninna magana
ಗೋಕುಲದೊಳು ನಿನ್ನ ಮಗನ
Composer: Purandara Dasaru · Deity: Krishna / Govinda / Mukunda · Genre: Bhakti
Kannada lyrics
ಗೋಕುಲದೊಳು ನಿನ್ನ ಮಗನ ಹಾವಳಿ ಘನವಾಯಿತಮ್ಮ ಜೋಕೆ ಮಾಡಿಕೊ ಇಂಥ ದುರುಳತನಕೆ ನಾವು ನಿಲ್ಲೆವಮ್ಮ ||ಪ|| ಬಾಲರ ಒಡಗೂಡಿ ಬಂದೆಮ್ಮ ಮನೆಗಳ ಪೊಗುವನಮ್ಮ , ಒರಳ ಮೇಲೇರಿ ನೆಲುವಿನ ಮೇಲಿದ್ದ ಬೆಣ್ಣೆಯ ಮೆಲುವನಮ್ಮ ಜಾಲವ ಮಾಡಿ ಎಲ್ಲರಿಗಿಂದ ತಾ ಮುನ್ನೆ ಜಾರ್ವನಮ್ಮ, ಗೋ- ಪಾಲ ಬೇಡೆಂದು ಹೇಳಿದರೆ ಇವಗೆ ಬುದ್ಧಿ ಸಾಲದಮ್ಮ || ಗಂಡನುಳ್ಳವಳೆಂದು ಬೇಡಿಕೊಂಡರೆ ಮಾತ ಕೇಳನಮ್ಮ, ಈ ಪುಂಡುಗಾರ ನಮ್ಮ ಪುರವನೆಲ್ಲ ಸೂರೆಗೊಂಡನಮ್ಮ ಗಂಡರೆಲ್ಲರು ಇವನ ನೋಡಿ ತಮ್ಹೆಂಡಿರ ಬಿಡುವರಮ್ಮ, ಕಂಡ- ಕಂಡ ವೇಳೆಯಲ್ಲಿ ಚಿಕ್ಕ ಚೆಲುವೆಯರ ಕೂಡ್ವನಮ್ಮ || ಮಾರಲೀಸನು ಹಾಲು ಮೊಸರ ಕಂಡರೆ ಬಿಟ್ಟು ಬಾರನಮ್ಮ , ತನ್ನ ವಾರಿಗೆ ಸತಿಯರ ಒಲಿಸಿಕೊಂಬ ಮಾಯಗಾರನ…
Transliteration
Gokuladolu ninna magana havali ganavayitammajoke Madiko intha durulatanake navu nillevamma ||pa|| Balara odagudi bandemma manegala poguvanamma , orala Meleri neluvina melidda benneya meluvanamma Jalava madi ellariginda ta munne jarvanamma, go- Pala bedendu helidare ivage buddhi saladamma ||1|| Gandanullavalendu bedikondare mata kelanamma, I Pundugara namma puravanella suregondanamma Gandarellaru i…