Haridasa Sahitya — Vyasadasa
Giliyu panjaradolilla
ಗಿಳಿಯು ಪಂಜರದೊಳಿಲ್ಲಾ
Composer: Purandara Dasaru · Deity: Hari · Genre: Philosophy
Kannada lyrics
ಗಿಳಿಯು ಪಂಜರದೊಳಿಲ್ಲಾ|| ಪ|| ಶ್ರೀ ರಾಮ ರಾಮಾ ಬರಿದು ಪಂಜರವಾಯಿತಲ್ಲಾ|| ಅ ಪ|| |ಅಕ್ಕ ನಿನ್ನ ಮಾತು ಕೇಳಿ ಚಿಕ್ಕದೊಂದು ಗಿಳಿಯ ತಂದು ಸಾಕಿದೆ| ಅಕ್ಕ ನಾನಿಲ್ಲದ ವೇಳೆ ಬೆಕ್ಕು ಕೊಂಡು ಹೋಯಿತಯ್ಯೋ|| ೧|| ಅರ್ತಿಗೊಂದು ಗಿಳಿಯ ಸಾಕಿದ ಮುತ್ತಿನಹಾರವ ಹಾಕಿದೆ| ಮುತ್ತುಗೊಂಡು ಗಿಳಿಯು ತಾನು ಎತ್ತ ಓಡಿ ಹೋಯಿತಯ್ಯೋ|| ೨|| ಹಸಿರು ಬಣ್ಣದ ಗಿಳಿಯು ಕುಶಲ ಬುದ್ಧಿಯ ಗಿಳಿಯು| ಅಸುವ ಕುಂದಿ ಗಿಳಿಯು ತಾನು ಹಸನಗೆಡಿಸಿ ಹೋಯಿತಯ್ಯೋ|| ೩|| ಮುಪ್ಪಾಗದ ಬೆಣ್ಣೆಯನು ತಪ್ಪದೇ ನಾ ಹಾಕಿದೆ ಸಾಕಿದೆ| ಒಪ್ಪದಿಂದ ಗಿಳಿಯು ಈಗ ತೆಪ್ಪನೇ ಹಾರಿ ಹೋಯಿತಯ್ಯೋ|| ೪|| ರಾಮ ರಾಮ ಎಂಬೋ ಗಿಳಿ ಕೋಮಲ ಕಾಯದ ಗಿಳಿ| ಸಾಮಜ ಪೋಷಕ ತಾನು ಪ್ರೇಮದಿ ಸಾ…
Transliteration
|akka ninna matu keli cikkadondu giliya tandu sakide| Akka nanillada vele bekku kondu hoyitayyo|| 1|| Artigondu giliya sakida muttinaharava hakide| Muttugondu giliyu tanu etta odi hoyitayyo|| 2|| Hasiru bannada giliyu kusala buddhiya giliyu| Asuva kundi giliyu tanu hasanagedisi hoyitayyo|| 3|| Muppagada benneyanu tappade na hakide sakide| Oppadinda giliyu Iga teppane hari hoyitayyo|| 4|| Rama rama…