Haridasa Sahitya — Vyasadasa

Gauri devige saki tare Araati

ಗೌರಿ ದೇವಿಗೆ ಸಖಿ ತಾರೆ ಆರುತಿ

Composer: Shyamasundara Dasaru · Deity: Gauri · Genre: Bhakti

Kannada lyrics

ಗೌರಿ ದೇವಿಗೆ ಸಖಿ ತಾರೆ ಆರುತಿ||pa|| ಮುನಿಜನ ವಂದಿತೆ ಮನದಭಿ ಮಾನಿಯೆ | ಗಣಪತಿ ಷಣ್ಮುಖ ಜನನಿ ದೇವಿಗೆ ||1|| ಶಂಕರಿ ಭಕ್ತಸುಶಂಕರಿ ದೈತ್ಯ ಭ ಯಂಕಾರಿಯಾದ ಶಶಾಂಕ ಮುಖಿಗೆ ||2|| ಶಾಮಸುಂದರನಾಮ ಪತಿ ಸಹ ನೇಮದಿ ಪಠಿಸುವ ಹೈಮಾವತಿಗೆ ||3||

Transliteration

Gauri devige saki tare Aruti||pa|| Munijana vandite manadabi maniye | Ganapati shanmuka janani devige ||1|| Sankari baktasusankari daitya Ba Yamkariyada sasanka mukige ||2|| Samasundaranama pati saha Nemadi pathisuva haimavatige ||3||