Haridasa Sahitya — Vyasadasa

Gatika Chaladi ninta Sri hanumanta

ಘಟಿಕಾಚಲದಿ ನಿಂತ ಪಟು ಹನುಮಂತನ

Composer: Purandara Dasaru · Deity: Mukhyaprana / Vaayu / Hanuma / Bheema · Genre: Bhakti

Kannada lyrics

ಘಟಿಕಾಚಲದಿ ನಿಂತ ಪಟು ಹನುಮಂತನ ಪಠನೆಯ ಮಾಡಲುತ್ಕಟದಿ ಪೊರೆವೆನೆಂದು ಚತುರ ಯುಗದಿ ತಾನು ಮುಖ್ಯಪ್ರಾಣನು ಚತುರಮುಖನಯ್ಯನ ಚತುರ ಮೂರುತಿಗಳನು ಚತುರತನದಿ ಭಜಿಸಿ ಚತುರ್ಮುಖನಾಗಿ ಜಗಕೆ ಚತುರ್ವಿಧ ಫಲ ಕೊಡುತೆ ಸರಸಿಜ ಭವಗೋಸ್ಕರ ಕಲ್ಮಷದೂರ ವರ ಚಕ್ರತೀರ್ಥ ಸರ ಮೆರೆವಾಚಲದಿ ನಿತ್ಯ ನರಹರಿಗೆದುರಾಗಿ ಸ್ಥಿರಯೋಗಾಸನದಿ ಕರೆದು ವರಗಳ ಕೊಡುತೆ ಶಂಖ ಚಕ್ರವ ಧರಿಸಿ ಭಕ್ತರ ಮನಃ- ಪಂಕವ ಪರಿಹರಿಸಿ ಪಂಕಜನಾಭ ಶ್ರೀ ಪುರಂದರವಿಠಲನ ಬಿಂಕದ ಸೇವಕ ಸಂಕಟ ಕಳೆಯುತ

Transliteration

Gatika Chaladi ninta Sri hanumanta Sri hanumanta Gatika Chaladi ninta patu hanumantanu pathaneya madalu tatadi porevenendu || Chaturayugadi tanu atibalavaatanu chaturmukanayyanu Chaturamurutigala chaturatanadi bhajisi chaturmukanagi chaturvida Pala koduta ||1|| Sarasija bhavagoskara kalmasha dura varachakratirthasara Mereva Paladi nitya naraharigeduragi sthirayogasanadhi varava koduvenendu ||2|| S…