Haridasa Sahitya — Vyasadasa

Gange shobana tharange

ಗಂಗೆ ಶೋಭನ ತರಂಗೆ

Composer: Vijaya Dasaru · Deity: Ganga · Genre: Bhakti

Kannada lyrics

ಗಂಗೆ ಶೋಭನ ತರಂಗೆ ರಂಗನಂಘ್ರಿಯಂಗುಷ್ಠೆ ಸಂಗೆ ಭವಭಂಗೆ ||pa|| ಇಂದ್ರಸೇನನು ಸ್ವರ್ಗವ ಪರಿಹರಿಸಿ ಯಿರಲು ಉಪೇಂದ್ರ ಭಗವಂತ ಪಟುರೂಪ ಧರಿಸಿ ಚಂದ್ರಮಂಡಲ ಮೀರಿ ಬೆಳದಜಾಂಡವನೊಡಿಯೆ ಸಾಂದ್ರಗುಣದಿಂದ ಉದ್ಭವಿಸಿದೆ ಜನನಿ ||1|| ಕಮಲಜನು ಪಾತ್ರಿಯೊಳು ಧರಿಸಿ ಸಿರಿಹರಿಪಾದ ಕಮಲವನು ತೊಳಿಯಲಾವೇಗದಿಂದ ವಿಮಲಗತಿಯಲಿ ಬಂದು ಮಂದಾಕಿನಿ ಎನಿಸಿ ಸುಮನ ಸಾವನಿಯಲ್ಲಿ ಪರಿದೆ ಸ್ವರ್ಣನದಿಯೇ||2|| ಧ್ರುವಲೋಕಕಿಳಿದು ಅಮರಾಲಯವ ಸಾರಿದೆ ರವಿಯಂತೆ ಪೊಳೆವುತ ಅಜನಮಧ್ಯ ತವಕದಿಂದಲಿ ಧುಮುಕಿ ಚತುರಭಾಗವಾದೆ ಭವ ಪರಿಹರಿಸಿ ಭಾಗೀರಥಿ ಎನಿಸಿದೆ ||3|| ಶಿವನ ಮಸ್ತಕದಲ್ಲಿ ಶೋಭಿಸುವ ಮಹಾಮಹಿಮೆ ಭವದೊರೆ ಭಗೀರಥಗೆ ಒಲಿದು ಬರುತ ಕವಿಜನ್ಹು ಮುನಿಯಿಂ…

Transliteration

gange SOBana tarange rangananGriyanguShThe sange BavaBange ||pa|| indrasEnanu svargava pariharisi yiralu upEndra Bagavanta paTurUpa dharisi candramanDala mIri beLadajAnDavanoDiye sAndraguNadinda udBaviside janani ||1|| kamalajanu pAtriyoLu dharisi siriharipAda kamalavanu toLiyalAvEgadinda vimalagatiyali baMdu maMdAkini enisi sumana sAvaniyalli paride svarNanadiyE||2|| dhruvalOkakiLidu amarAlayava…