Haridasa Sahitya — Vyasadasa

Ettidalaaratiyaa shree tulasige

ಎತ್ತಿದಳಾರತಿಯಾ ಶ್ರೀ ತುಳಸಿಗೆ

Composer: Bheemesha Vittala Dasaru · Deity: Tulasi · Genre: Aarati

Kannada lyrics

ಎತ್ತಿದಳಾರತಿಯಾ ಶ್ರೀ ತುಳಸಿಗೆ | ಭಕ್ತಿ ಭಾವಗಳಿಂದಲಿ ||ಪ|| ಎತ್ತಿದಳಾರತಿ ಸತ್ಯಾಧರ್ಮನ ಸತಿ | ಅಚ್ಯುತನ ತೋರೆಂದು ಅತಿ ದೈನ್ಯದಿಂದಲಿ || ಆ. ಪ.|| ಗಂಧ ಅರಿಶಿನ ಕುಂಕುಮ | ಪಾಂಚಾಲಿ ತಾ ವೃಂದಾವನ ಪೂಜಿಸಿ || ದುಂಡು ಮಲ್ಲಿಗೆ ಕರ್ಪೂರ ಧೂಪ ದೀಪಗಳಿಂದ | ಇಂದ್ರ ನಂದನ ಸತಿ ಒಂದೇ ಮನಸಿನಿಂದ || 1 || ಹಾರ ಕೇಯೂರದಿಂದ| ಮುಕ್ತಾವಳಿ ನಾರಿ ತುಳಸಿಗೆ ಆರ್ಸಿಸಿ|| ಚಾರು ಹಸ್ತಗಳಿಂದ ನಾರಿ ಬೊಗಸೆಯ ಒಡ್ಡಿ | ವಾರಿಜನಾಭನ ತೋರಿಸೆಂದೆನುತಲಿ || 2 || ಅನ್ನ ಬೇಡಲು ಮುನಿಗಳು | ಪತಿಗಳು ಬಂದು ನನ್ನನ್ನೇ ಕೇಳುವರು | ಪನ್ನಂಗವೇಣಿ ನಾ ನಿನ್ನ ಮೊರೆ ಹೊಕ್ಕೇನೆ | ಅನ್ನಾಂಗ ಶಯನನ ತೋರು ತೋರೆನುತಲಿ || 3 || ಕ್ಷುದದಿಂದಾದವರು…

Transliteration

Ettidalaaratiyaa shree tulasige | bhakti bhaavagalindali ||pa|| Ettidalaarati satyadharmana sati | achyutana torendu ati dainyadindali || a. Pa.|| Gandha arishina kumkuma | paanchaali taa vrundaavana poojisi || Dundu mallige karpura dhoopa deepagalinda | indra nandana sati onde manasininda || 1 || Haara keyooradinda|muktaavali naari tulasige arcisi|| Caaru hastagalinda naari bogaseya oddi | vaarij…