Haridasa Sahitya — Vyasadasa

Ettanado I maya samsara

ಎತ್ತಣದೊ ಮಾಯಾ ಸಂಸಾರ

Composer: Vijaya Dasaru · Deity: Hari · Genre: Ugabhoga

Kannada lyrics

ಎತ್ತಣದೊ ಮಾಯಾ ಸಂಸಾರ ನಿತ್ಯವಲ್ಲ ವಿಚಾರಿಸೆ ತುತ್ತನು ಮೆಲುವಾಗ ಕಂಟಕವಿದ್ದಂತೆ ಮೃತ್ಯು ಮಾರಿಗಳು ಕಾದಿಪ್ಪವೆಲ್ಲ ಮತ್ರ್ಯದಲ್ಲಿ ಪುಟ್ಟಿ ಸುಖ ಬಯಸುವ ನರಗೆ ಹತ್ತುಸಾವಿರ ಪ್ರಣಾಮ ಮಾಡುವೆನೊ ಉತ್ತಮಗತಿ ಬಯಸುವ ನಾಯಿ ತಲೆ ಮೇಲಿನ ಬುತ್ತಿಯಂದದಿ ಕಾಣೊ ಸತಿ ಸುತರು ಚಿತ್ತದಲ್ಲಾಡುವ ವಿಜಯವಿಠಲರೇಯನ ತುತ್ತಿಸಲು ಬಂದು ಕೈವಲ್ಯ ದಾರಿಗಿಡುವ|

Transliteration

Ettanado I maya samsara Nityavalla nityavalla vicarise Tuttuvanu meluvaga kantha kavidante Mrutyumarigalu kadippavella Martyadali putti suka bayasuva narage Hattu savira pranama maduveno Uttama gati bayasuva nayi talemelina- Buttiyandadi kano satisutaru Chittadalladuva vijayavithalareyana Tutisalu bandu kaivalyadariliduva ||