Haridasa Sahitya — Vyasadasa

Eravina sirige

ಎರವಿನ ಸಿರಿಗೆ

Composer: Purandara Dasaru · Deity: Hari · Genre: Philosophy

Kannada lyrics

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ ನೀರ ಕಡೆದರುಂಟೆ ಬೆಣ್ಣೆ ಜೀವವೆ ಉರಗನ ಹೆಡೆಯ ನೆಳಲ ಸೇರಿದ ಕಪ್ಪೆ ಸ್ಥಿರಕಾಲ ಬಾಳ್ವುದೆ ಜೀವವೆ ॥ಪ॥ ಸತಿ ಸುತರೆಂದು ನೆಚ್ಚಲು ಬೇಡ ಮನದೊಳು ಹಿತವರೊಬ್ಬರ ಕಾಣೆ ಜೀವವೆ ವೃಥಾ ನೀನು ಕೆಡಬೇಡ ಮರಣವು ತಪ್ಪದು ನಾಥ ದಶಕಂಠಗಾದರು ಜೀವವೆ ॥೧॥ ಅಸೆ ಮಾಡಲು ಬೇಡ ಭಾಷೆ ತಪ್ಪಲು ಬೇಡನ್ಯ ಸ್ತ್ರೀಸಂಗವು ಬೇಡ ಜೀವವೆ ಏಸೇಸು ಜನ್ಮಾಂತರ ಕಳೆದುಳಿದರು ಈ ಸಾವು ತಪ್ಪದು ಜೀವವೆ ॥೨॥ ಆನೆ ಕುದುರೆ ಮಂದಿ ಶಾನೆ ಭಂಡಾರವು ಏನು ಪಡೆದರಿಲ್ಲ ಜೀವವೆ ಮಾನ ಸಹ ಸರ್ವ ಹರಿಗೆ ಅರ್ಪಣ ಮಾಡಿ ಪುನೀತನಾಗಿರು ಜೀವವೆ ॥೩॥ ಕೆರೆಯ ಕಟ್ಟಿಸು ಮತ್ತೆ ಪೂದೋಟ ಹಾಕಿಸು ಸೆರೆಯ ಬಿಡಿಸಲದು ಪುಣ್ಯ ಜೀವವೆ ಕರೆಯದೆ ಮನೆಗೆ ಬ…

Transliteration

Eravina sirige bimmane beretare nira Kadedarunte benne jivave Uragana hedeya nelala serida kappe Sthirakala balvude jivave ||pa|| Sati sutarendu neccalu beda manadolu Hitavarobbara kane jivave Vrutha ninu kedabeda maranavu tappadu Natha dasakanthagadaru jivave ||1|| Ase madalu beda bashe tappalu bedanya Strisangavu beda jivave Esesu janmantara kaledulidaru I savu tappadu jivave ||2|| Ane kudure ma…