Haridasa Sahitya — Vyasadasa

Enu saviyo

ಏನು ಸವಿಯೋ

Composer: Purandara Dasaru · Deity: Krishna / Govinda / Mukunda · Genre: Bhakti

Kannada lyrics

ಏನು ಸವಿಯೋ ನಿನ್ನ ಕೊಳಲು ಗೊಲ್ಲ ಮಾನಿನಿಯರಿಗೆಲ್ಲ ಮಾಡಿತು ಮರುಳು ||ಪ.|| ಬರೆಗಡಿಗೆಯ ಕಡೆಯುವರೋ ಗೋ-ಕರು ಎಂದು ಗೂಳಿಯ ಬಿಟ್ಟು ಎತ್ತಾನ್ಹಿಂಡುವರೋ ತಿರುಗಿ ಕನ್ನಡಿಯ ನೋಡುವರೋ ಹಿರಿಹಿರಿ ಹಿಗ್ಗಿ ಕಣ್ಣಿಗೆ ಕುಂಕುಮ ತೀಡುವರೋ ||೧| ಮಕ್ಕಳ ಬಡಿದಳಿಸುವರೋ ಬೆಕ್ಕು ಮರಿಯಾನೆತ್ತಿ ಮುದ್ದಾನಿಕ್ಕುವರೋ ಉಕ್ಕುವ ಹಾಲು ಲೆಕ್ಕಿಸರೋ ಬೋರಲಿಕ್ಕಿದ ಮಡಿಕೆಗೆ ನೀರ ಚೆಲ್ಲುವರೋ ||೨|| ಆ ನಾದಾ ಇನ್ನೊಮ್ಮೆ ಮಾಡೋ ನಿನ್ನಾಧೀನವಾಗಿಹುದಯ್ಯ ಈ ಜಗ ನೋಡೋ ಭಕ್ತವತ್ಸಲ ದಯ ಮಾಡೋ ಪುರಂದರವಿಠಲ ನೀ ಎನ್ನ ಕೈಯ ಬಿಡದಿರೋ ||೩||

Transliteration

Enu saviyo ninna kolalu golla maniniyarigella maditu marulu ||pa.|| Baregadigeya kadeyuvaro go-karu emdu guliya bittu ettan hinduvaro tirugi kannadiya noduvaro hirihiri higgi kannige kumkuma tiduvaro ||1| Makkala badidalisuvaro bekku mariyanetti muddanikkuvaro ukkuva halu lekkisaro boralikkida madikege nira celluvaro ||2|| Aa nada innomme mado ninnadhinavagihudayya I jaga nodo bhaktavatsala daya m…