Haridasa Sahitya — Vyasadasa

Enu madidarenu

ಏನು ಮಾಡಿದರೇನು

Composer: Purandara Dasaru · Deity: Hari · Genre: Philosophy

Kannada lyrics

ಏನು ಮಾಡಿದರೇನು ಭವ ಹಿಂಗದು ದಾನವಾಂತಕ ನಿನ್ನ ದಯವಾಗದನಕ ।।ಪ।। ಅರುಣೋದಯದಲೆದ್ದು ಅತಿಸ್ನಾನ ಮಾಡಿ ಬೆರಳನೆಣಿಸಿದೆ ಅದರ ನಿಜವರಿಯದೆ ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ ಹರಿ ನಿನ್ನ ಕರುಣಾಕಟಾಕ್ಷವಾಗದನಕ ।।೧।। ಶ್ರುತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ ಅತಿಶೀಲಗಳನೆಲ್ಲ ಮಾಡಿ ದಣಿದೆ ಗತಿಯ ಪಡೆವೆನೆಂದು ಕಾಯ ದಂಡಿದಿಸಿದೆನೊ ರತಿಪತಿಪಿತ ನಿನ್ನ ದಯವಾಗದನಕ ।।೨।। ಧ್ಯಾನವನು ಮಾಡಿದೆನು ಮೌನವನು ತಾಳಿದೆನು ನಾನು ಪುರುಷಾರ್ಥಕೆ ಮನವನಿಕ್ಕಿ ಅನಾಥ ಬಂಧು ಶ್ರೀ ಪುರಂದರವಿಠಲನ ಧ್ಯಾನಿಸುವರೊಡಗೂಡಿ ನೆಲೆಗಾಣದನಕ ।।೩।।

Transliteration

Enu madidarenu Bava hingadu Danavantaka ninna dayavagadanaka ||pa|| Arunodayadaleddu atisnana madi Beralaneniside adara nijavariyade Carana sashtangavanu madi na danideno Hari ninna karunakatakshavagadanaka ||1|| Srutisastra puranagalanodi bendade Atisilagalanella madi danide Gatiya padevenendu kaya dandidisideno Ratipatipita ninna dayavagadanaka ||2|| Dhyanavanu madidenu maunavanu talidenu Nanu p…