Haridasa Sahitya — Vyasadasa

Enu illada eradu dinada samsara,

ಏನು ಇಲ್ಲದ ಎರಡು ದಿನದ ಸಂಸಾರ

Composer: Kanakadasaru · Deity: Hari · Genre: Advice

Kannada lyrics

ಏನು ಇಲ್ಲದ ಎರಡು ದಿನದ ಸಂಸಾರ ಜ್ಞಾನದಲಿ ದಾನಧರ್ಮವ ಮಾಡಿರಯ್ಯ ||ಪ|| ಹಸಿದು ಬಂದವರಿಂಗೆ ಅಶನವೀಯಲುಬೇಕು ಶಿಶುವಿಂಗೆ ಪಾಲ್ಬೆಣ್ಣೆಯನು ನಡೆಸಬೇಕು ಹಸನಾದ ಭೂಮಿಯನು ಧಾರೆಯೆರೆಯಲುಬೇಕು ಭಾಷೆ ಕೊಟ್ಟ್ ಬಳಿಕ ನಿಜವಿರಲು ಬೇಕು ||೧|| ಕಳ್ಳತನಗಳ ಮಾಡಿ ಒಡಲು ಹೊರೆಯಲು ಬೇಡ ಠೌಳಿಗಾರನು ಆಗಿ ತಿರುಗಬೇಡ ಕುಳ್ಳಿರ್ದ ಸಭೆಯೊಳಗೆ ತಿತ್ಯವ ನಡೆಸಬೇಡ ಒಳ್ಳೆಯವನೆಂಬ ಉಬ್ಬಲು ಬೇಡ ಮನುಜ ||೨|| ದೊರೆತನವು ಬಂದಾಗ ಕೆಟ್ಟು ನುಡಿಯಲು ಬೇಡ ಸಿರಿ ಬಂದ ಕಾಲಕ್ಕೆ ಮೆರೆಯಬೇಡ ಸಿರಿವಂತನಾದರೇ ನೆಲೆಯಾದಿಕೇಶವನ ಚರಣ ಕಮಲವ ಸೇರಿ ಸುಖಿಯಾಗು ಮನುಜ ||೩||

Transliteration

Enu illada eradu dinada samsara, Jnanadali dana-dharmava madiraiyya||pa|| Hasidu bandavarige asanaviyalu beku, Sisuvige palpenne unisa beku, Hasanada bumiyanu dhareyereyali beku, Husi madadane BA nadesale beku||1|| Kallatanagala madi odala horeyalu beda, Kullirta sabeyolage kutila nadesalu beda, Olleyava nanendu balu hemmelira beda, Balve sthiravendu ni nambi keda beda||2|| Doretanavu bandaga kett…