Haridasa Sahitya — Vyasadasa
Enu brahme manujarige
ಏನು ಭ್ರಮೆ ಮನುಜರಿಗೆ
Composer: Sripadarajaru · Deity: Vishnu · Genre: Advice /Philosophy
Kannada lyrics
ಏನು ಭ್ರಮೆ ಮನುಜರಿಗೆ ಎಷ್ಟು ಮಮತೆ ಪ್ರಕೃತಿಯಲಿ ಮೀನು ಗಾಳವ ನುಂಗಿ ಮೋಸಹೋದ ತೆರನಂತೆ ||ಧ್ರುವ|| ನನ್ನ ಮನೆ ನನ್ನ ಸತಿ ನನ್ನ ಸುತರೆಂದೆನಿಸಿ ಹೊನ್ನುಗಳ ಗಳಿಸಿ ಹೆಚ್ಚು ಹೋರ್ಯಾಡಿ ಸಣ್ಣವರ ಮದುವೆ ಸಂಭ್ರಮದಿ ಮಾಡುವೆನೆಂದು ಅನ್ನ ಮೊದಲು ಕಾಣದೆ ಅಂತರಪಿಶಾಚಿಯಂತೆ ||೧|| ಬಲುವೋದಿಕೆಯಲ್ಲಿ ಬಲ್ಲವರೆನಿಸಬೇಕೆನುತ ಹಲವು ಬುದ್ಧಿಯಲಿ ಹಿರ್ರನೆ ಹಿಗ್ಗುತ ಮಲಿನ ಮನಸಿನಜ್ಞಾನದಲಿ ತಾನರಿಯದೆ ಬಲೆಯಲ್ಲಿ ಸಿಲುಕಿದ ಪಕ್ಷಿಯಂತೆ ಬಳಲುತಿಹ ||೨|| ಮಿಗಿಲು ಆಸೆಗೆ ಬಿದ್ದು ಬಗೆ ಬಗೆ ಹೂಣಿಕೆಯಲಿ ಹೊಗದಲ್ಲಿ ಹೊಗುವರು ಹೊಲಬಿಟ್ಟು ತಿಳಿಯರು ಖಗವಾಹನ ಮುದ್ದು ರಂಗವಿಠಲನ ನಾಮ ಸ್ಮರಿಸಲು ವಿಗಡ ಸಂಸಾರ ಹಗರಣ ನೀರಗುಳ್ಳೆಯಂತೆ ||೩||
Transliteration
Enu bhrame manujarige eshtu mamate prakrutiyalli | meenu gaalava nungi mosahoda teranante || pa || Nanna mane nanna sati nanna sutarendenisi | honnugala galisi heccaagi horaadi | sannavara maduve sambhramadi maaduvenendu | anna modalu kaanade antar pishaaciyante || 1 || Balu Odikeyalli ballavarenisabekenuta | halavu buddhiyali hirrane higguta | balina manasinaj~jaanadali taanariyade | baleyalli si…