Haridasa Sahitya — Vyasadasa

Entu varnipe nammamma

ಎಂತು ವರ್ಣಿಪೆ ನಮ್ಮಮ್ಮಾ

Composer: Vijaya Dasaru · Deity: Mukhyaprana / Vaayu / Hanuma / Bheema · Genre: Bhakti

Kannada lyrics

ಎಂತು ವರ್ಣಿಪೆ ನಮ್ಮಮ್ಮಾ | ಯಂತ್ರೋದ್ಧಾರಕÀನಾಗಿ ಮೆರೆವನಾ||pa|| ಕೋತಿ ರೂಪದಲಿ ಬಂದು | ಭೂತಳಕೆ ಬೆಡಗು ತೋರಿ || ಈ ತುಂಗಭದ್ರೆಯಲ್ಲಿ | ಖ್ಯಾತಿಯಾಗಿಪ್ಪ ಯತಿಯಾ||1|| ಸುತ್ತಲು ವಾನರ ಬದ್ಧ | ಮತ್ತೆ ವಲಯಾಕಾರ ಮಧ್ಯ || ಚಿತ್ರಕೋಣ ಅದರೊಳು | ನಿತ್ಯದಲಿಯಿಪ್ಪ ಯತಿಯಾ ||2|| ವ್ಯಾಸ ಮುನಿರಾಯರಿಂದ | ಈ ಶಿಲೆಯೊಳಗೆ ನಿಂದು || ಶ್ರೀಶ ವಿಜಯವಿಠ್ಠಲನ್ನ | ಏಸು ಬಗೆ ತುತಿಪನ್ನ ||3||

Transliteration

Entu varnipe nammamma | Yantroddharakaànagi merevana||pa|| Koti rupadali bandu | Butalake bedagu tori || I tungabadreyalli | Kyatiyagippa yatiya||1|| Suttalu vanara baddha | Matte valayakara madhya || Citrakona adarolu | Nityadaliyippa yatiya ||2|| Vyasa munirayarinda | I sileyolage nindu || Srisa vijayaviththalanna | Esu bage tutipanna ||3||