Haridasa Sahitya — Vyasadasa
Entu tutisali enna
ಎಂತು ತುತಿಸಲಿ ಎನ್ನದೇವನ
Composer: Gopala Dasaru · Deity: Mukhyaprana / Vaayu / Hanuma / Bheema · Genre: Bhakti
Kannada lyrics
ಎಂತು ತುತಿಸಲಿ ಎನ್ನದೇವನ ಸಂತತ ನಮ್ಮ ಸಲಹೋನ ಅಂತರಂಗದಿ ಹರಿಯ ತೋರಿಸಿ ಸಂತೋಷದಿಂದ ನಲಿವ ಪವನನ ।।ಪ।। ತಾನು ಮಾಡಿದ ಕರ್ಮಶೇಷವು ತಾನು ತಿಳುಹಿದ ಜ್ಞಾನಶೇಷವು ತಾನು ಮಾಡಿದ ಭಕುತಿಶೇಷವು ನಾನಾ ಸಾಧನಶೇಷವು ತಾನು ಕರುಣಿಸಿ ಜೀವಯೋಗ್ಯತೆಯೇನು ಅರಿತು ಕರ್ಮಮಾಡಿಸಿ ತಾನು ಸಹಿತ ಧ್ಯಾನದಲಿ ಹರಿ ಕಾಣಿಸಿ ತೋರ್ಪ ಕರುಣೆಯ ।।೧।। ಇವನ ಪ್ರೇರಣೆ ಹರಿಯ ಪ್ರೇರಣೆ ಇವನ ಸೇವೆಯು ಹರಿಯ ಸೇವೆಯು ಇವನ ಕರುಣವೆ ಹರಿಯ ಕರುಣವು ಇವನ ಬಲವೇ ಪ್ರಬಲವು ಇವನು ನಂಬಲು ಹರಿಯು ನಂಬುವ ಇವನು ಒಲಿಯಲು ಹರಿಯು ಒಲಿಯುವ ಪವನಾಖ್ಯನಾಗಿ ನಮ್ಮನು ಪವನಗತಿ ಪೊಂದಿಸುವನ ।।೨।। ಜ್ಞಾನಭಕುತಿ ವೈರಾಗ್ಯಖಣಿಯು ದಾನವಾಂತಕ ಧರ್ಮಶೀಲ ಪೂರ್ಣಬೋಧೆಯ ಪುಣ್ಯನಾಮಕ…
Transliteration
Entu tutisali ennadevana santata namma salahona Antarangadi hariya torisi santoshadinda naliva pavanana ||pa|| Tanu madida karmaseshavu tanu tiluhida j~janaseshavu Tanu madida bakutiseshavu nana sadhanaseshavu Tanu karunisi jivayogyateyenu aritu karmamadisi Tanu sahita dhyanadali hari kanisi torpa karuneya ||1|| Ivana prerane hariya prerane ivana seveyu hariya seveyu Ivana karunave hariya karunavu…