Haridasa Sahitya — Vyasadasa
Entu pogalalo ninna
ಎಂತು ಪೊಗಳಲೊ ನಿನ್ನ-ಯತಿಕುಲ
Composer: Vyasarajaru · Deity: Sri Madhwacharyaru · Genre: Bhakti
Kannada lyrics
ಎಂತು ಪೊಗಳಲೊ ನಿನ್ನ-ಯತಿಕುಲ ಶಿರೋರನ್ನ ||pa|| ಶಾಂತ ಮಧ್ವಾಚಾರ್ಯ ಸಂತ ಕುಲವರ್ಯ ||a.pa|| ಪ್ರಥಮಾವತಾರದಲಿ ವ್ರತತಿ ರಾಮನ ಭಜಿಸಿಅತಿ ಪಂಥದಿಂದ ಶರಧಿಯನು ದಾಟಿಕ್ಷಿತಿಜೆಗಂಕಿತವಿತ್ತು ಪೂದೋಟವನು ಕಿತ್ತೆಪ್ರತಿಗಾಣೆ ನಿನಗೆ ಅಪ್ರತಿ ಪರಾಕ್ರಮಿಯೆ ||1|| ದ್ವಿತಿಯಾವತಾರದಲಿ ದೇವಕೀಜನ ಕಂಡುಸತಿಗೆ ಕಾಮಿಸಿದವನ ಸಾಹಸದಿ ಸದೆದೆ ಪ್ರತಿಯಾದ ಮಾಗಧನಪೃತನದಲಿ ನೀ ಕೊಂದೆಪ್ರತಿಯ ಕಾಣೆನೊ ನಿನಗೆ ಮೂಜ್ಜಗದೊಳಗೆ ||2|| ತೃತಿಯಾವತಾರದಲಿ ತ್ರಿಜಗನುತಿಸಲು ಬಂದುಯತಿಯಾಗಿ ಮಹಾಮಹಿಮನನು ಭಜಿಸಿದೆಕ್ಷಿತಿಗಧಿಕ ಉಡುಪಿಯಲಿ ಕೃಷ್ಣನ್ನ ನಿಲಿಸಿ ಪ್ರತಿಮತಮತವ ಮುರಿದೆ ಪೂರ್ಣಪ್ರಜ್ಞ ಮುನಿವರನೆ ||3||
Transliteration
Entu pogalalo ninna-yatikula siroranna ||pa|| Santa madhvadhvadhvacarya santa kulavarya ||a.pa|| Prathamavataradali vratati ramana Bajisi^^ati panthadinda Saradhiyanu Datikshitijegankitavittu pudotavanu kittepratigane ninage aprati parakramiye ||1|| Dvitiyavataradali devakijana kamdusatige kamisidavana sahasadi sadede Pratiyada magadhanaprutanadali ni kondepratiya kaneno ninage mujjagadolage ||2||…