Haridasa Sahitya — Vyasadasa

Entha mahime yenu cheluve

ಎಂಥ ಮಹಿಮ ಏನು ಚಲುವನೆ

Composer: Haridasa · Deity: Krishna · Genre: Dasara Pada

Kannada lyrics

ಎಂಥ ಮಹಿಮ ಏನು ಚಲುವನೆ ಶ್ರೀ ಉಡುಪಿ ನಿಲಯ || ಪ|| ಎಂಥ ಮಹಿಮ ಏನು ಚಲುವ ಕಂತುಪಿತ ಶ್ರೀ ಬಾಲಕೃಷ್ಣ ಶಾಂತಯತಿಗಳಿಂದ ಪೂಜಿತ ನಿಂತ ಮಧ್ವಮುನಿಕರಾರ್ಚಿತ ||ಅ.ಪ|| ಕಂಡ ಕ್ಷಣದಿ ಮಂಡೆ ಬಾಗಿದ ಹಿಂಡು ಭಕ್ತರಘ ಕಳೆವ ಪುಂಡರೀಕ ನೇತ್ರ ಕನಕ- ಕಿಂಡಿಯಲ್ಲಿ ಕಾಂಬ ರೂಪ||1|| ಬಾಲರೆಂಟು ಯತಿಗಳಿಂದ ಲೀಲೆಯಿಂದ ಪೂಜೆಗೊಂಬ ಲೀಲಮಾನುಷರೂಪ ರುಕ್ಮಿಣಿ ಲೋಲ ಲೋಕಪಾಲ ಜಾಲ ||2|| ಕಾಲಕಾಲದ ಪೂಜೆಗೊಂಬ ಬಾಲತೊಡಿಗೆ ಧರಿಸಿಕೊಂಬ ವ್ಯಾಳಶಯನ ಮುದ್ದುಮುಖ ಗೋ ಪಾಲಕೃಷ್ಣವಿಠ್ಠಲನೀತ ||3||

Transliteration

Entha mahima Enu chaluvane sri udupi nilaya || pa|| .entha mahima Enu chaluva kantupita sri balakrushna Santayatigalinda pujita ninta madhvamunikararchita ||a.pa|| Kanda kshanadi mande bagida hindu baktaraga kaleva Pundarika netra kanaka- kindiyalli kamba rupa||1|| Balarentu yatigalinda lileyinda pujegomba Lilamanusharupa rukmini lola lokapala jala ||2|| Kalakalada pujegomba balatodige dharisikomb…