Haridasa Sahitya — Vyasadasa

Entha balavanthano

ಎಂಥಾ ಬಲವಂತನೋ

Composer: Purandara Dasaru · Deity: Mukhyaprana / Vaayu / Hanuma / Bheema · Genre: Bhakti

Kannada lyrics

ಎಂಥಾ ಬಲವಂತನೋ | ಕುಂತಿಯ ಸಂಜಾತನೋ | ಭಾರತಿಗೆ ಕಾಂತನೋ | ನಿತ್ಯ ಶ್ರೀಮಂತನೋ || ಪಲ್ಲವಿ || ರಾಮಚಂದ್ರಗೆ ಪ್ರಾಣನೋ | ಅಸುರ ಹೃದಯ ಬಾಣನೋ | ಖಳರ ಗಂಟಲ ಗಾಣನೋ | ಜಗದೊಳಗೆ ಪ್ರವೀಣನೋ || ೧ || ಬಂಡಿ ಅನ್ನವನುಂಡನೋ | ಬಕನ ಪ್ರಾಣವ ಕೊಂಡನೋ | ದ್ರೌಪದಿಗೆ ಗಂಡನೋ | ಭೀಮ ಪ್ರಚಂಡನೋ || ೨ || ಕುಂತಿಯ ಕಂದನೋ | ಸೌಗಂಧಿಕವ ತಂದನೋ | ಕುರುಕ್ಷೇತ್ರಕೆ ಬಂದನೋ | ಕೌರವರ ಕೊಂದನೋ || ೩ || ವೈಷ್ಣವಾಗ್ರಗಣ್ಯನೋ | ಸಂಚಿತಾಗ್ರಪುಣ್ಯನೋ | ದೇವಾವರೇಣ್ಯನೋ | ದೇವಾಶರಣ್ಯನೋ || ೪ || ಮಧ್ವಶಾಸ್ತ್ರ ರಚಿಸಿದನೋ | ಸದ್ವೈಷ್ಣವರ ಸಲಹಿದನೋ | ಉಡುಪಿಲಿ ಕೃಷ್ಣನ ನಿಲಿಸಿದನೋ | ಪುರಂದರ ವಿಠಲಗೆ ದಾಸನೋ || ೫ ||

Transliteration

entha balavanthano kundhiya sanjathaano| baarathige kanthano nithya sri manthano|| ramachandra praanano asura hrudaya paanano| kalara kantala kaanano jagadholage praveenano||1|| kundiya kumarano soukandhikava thandhano guru kshethrakke bandhano gowravara kondhano||2|| bandi annava nuntano bagana praanava kondano droupathige gandano beemanu prasandano||3|| vaishna vagra kanyano sanchithartha punyan…