Haridasa Sahitya — Vyasadasa
Enna kadehayisuvudu ninna bara , ninna neneyuttalihudu enna vyapara
ಎನ್ನ ಕಡೆಹಾಯಿಸುವುದು ನಿನ್ನ ಭಾರ , ನಿನ್ನ ನೆನೆಯುತ್ತಲಿಹುದು ಎನ್ನ ವ್ಯಾಪಾರ
Composer: Purandara Dasaru · Deity: Hari · Genre: Ugabhoga
Kannada lyrics
ಎನ್ನ ಕಡೆಹಾಯಿಸುವುದು ನಿನ್ನ ಭಾರ , ನಿನ್ನ ನೆನೆಯುತ್ತಲಿಹುದು ಎನ್ನ ವ್ಯಾಪಾರ ಎನ್ನ ಸತಿಸುತರಿಗೆ ನೀನೇ ಗತಿ , ನಿನ್ನನೊಪ್ಪಿಸುವುದು ಎನ್ನ ನೀತಿ ಎನ್ನ ಪಡಿಯಕ್ಕಿ ಸಲಹುವುದು ನಿನ್ನ ಧರ್ಮ , ನಿನ್ನ ಅಡಿಗೆರಗುವುದು ಎನ್ನ ಕರ್ಮ ಎನ್ನ ತಪ್ಪುಗಳನೆಣಿಸುವುದು ನಿನ್ನದಲ್ಲ , ನಿನ್ನ ಮರೆತು ಬದುಕುವುದು ಎನ್ನದಲ್ಲ ನೀನಲ್ಲ ಇನ್ನಾರಿಗೆ ಮೊರೆಯಿಡುವೆ ಪುರಂದರವಿಠಲ ||
Transliteration
Enna kadehayisuvudu ninna bara , ninna neneyuttalihudu enna vyapara Enna satisutarige nine gati , ninnanoppisuvudu enna niti Enna padiyakki salahuvudu ninna dharma , ninna adigeraguvudu enna karma Enna tappugalanenisuvudu ninnadalla , ninna maretu badukuvudu ennadalla Ninalla innarige moreyiduve purandara vittala||