Haridasa Sahitya — Vyasadasa

Enna binnapa kelu dhanvantri

ಎನ್ನ ಬಿನ್ನಪ ಕೇಳು ಎನ್ನ

Composer: Gopala Dasaru · Deity: Dhanvantari · Genre: Bhakti

Kannada lyrics

ಎನ್ನ ಬಿನ್ನಪ ಕೇಳು ಎನ್ನ ಬಿನ್ನಪ ಕೇಳು ಧನ್ವಂತ್ರಿ ದಯಮಾಡು ಸಣ್ಣವನು ಇವ ಕೇವಲ ಬನ್ನಬಡಿಸುವ ರೋಗವನ್ನು ಯೋಚನೆ ಮಾಡಿ ಚೆನ್ನಾಗಿ ಪಾಲಿಸುವುದು ಕರುಣಿ ||ಪ|| ಆರೋಗ್ಯ ಆಯುಷ್ಯ ಐಶ್ವರ್ಯವೆಂಬೊ ಈ ಮೂರು ವಿಧ ವಸ್ತುಗಳು ನಾರಾಯಣನ ಭಜಕರಾದವರ ಸಾಧನಕೆ ಪೂರ್ಣವಾಗಿಪ್ಪುವು ಘೋರ ವ್ಯಭಿಚಾರ ಪರನಿಂದೆ ಪರವಿತ್ತಾಪಹಾರ ಮಾಡಿದ ದೋಷದಿ ದರಿದ್ರರಾಗುವರು ಮೂರು ವಿಧದಿಂದಲಿ ಕಾರಣನು ನೀನೆ ದುಷ್ಕರ್ಮ ಪರಿಹರಿಸುವುದು ಹರಿಯೆ ||೧|| ವಸುಮತಿಯ ಮೇಲಿನ್ನು ಅಸುರಜನರೆ ಬಹಳ ವಶವಲ್ಲ ಕಲಿಯ ಬಾಧೆ ಬಿಸಿಲಿಂದ ಪೀಡಿತವಾದ ಸಸಿಗಳಂತೆ ಶಿಶುಗಳು ನಾವಿಪ್ಪೆವು ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು ಕುಶಲದಿ ಪಾಲಿಸುವುದು ಕೆಸರಿಂದ ಕೆಸರು ತೊಳೆ…

Transliteration

Gopala dasaru has composed this song for curing the disease of srinivasacharyaru(Bhavi Jagannatha dasaru) on the advice of vijaya dasaru on Lord Dhanvanthri. This is a medicine to cure all diseases. Enna binnapa kelu dhanvantri dayamaadu sannavanu iva kevala Bannabadisuva rogavannu mochane maadi chennaagi paalisuvudu karuni ||pa|| Aarogya aayushya aishvaryavembo I ee muruvidhavastugalu Naarayanana…