Haridasa Sahitya — Vyasadasa
Enendu kondadi stutisalo deva
ಏನೆಂದು ಕೊಂಡಾಡಿ ಸ್ತುತಿಸಲೋ ದೇವನಾನೇನು
Composer: Kanakadasaru · Deity: Srinivasa / Venkatesha · Genre: Philosophy
Kannada lyrics
ಏನೆಂದು ಕೊಂಡಾಡಿ ಸ್ತುತಿಸಲೋ ದೇವನಾನೇನು ಬಲ್ಲೆ ನಿನ್ನ ಮಹಿಮೆಗಳ ಮಾಧವ ||pa|| ಹರಿಮುಕುಂದನು ನೀನು ನರಜನ್ಮ ಹುಳು ನಾನುಪರಮಾತ್ಮನು ನೀನು ಪಾಮರನು ನಾನು ಗರುಡ ಗಮನನು ನೀನು ಮರುಳು ಪಾಪಿಯು ನಾನುಪರಂಜ್ಯೋತಿಯು ನೀನು ದುರುಳ ತಿರುಕನು ನಾನು ||1|| ವಾರಿಧಿಶಯನನಾದ ಕಾರುಣ್ಯನಿಧಿ ನೀನುಘೋರದಿಂದಿಹ ಕಾಮಿಕ್ರೋಧಿ ನಾನು ಈರೇಳು ಭುವನದೊಳು ಇರುವ ಮೂರುತಿ ನೀನುದೂರಿ ನಿನ್ನನು ಬೈವ ದುಷ್ಟ ನಾನು||2|| ಅಣುರೇಣು ತೃಣಗಳಲಿ ಪರಿಪೂರ್ಣನು ನೀನುಕ್ಷಣಕ್ಷಣಕೆ ಅವಗುಣದ ಕುಕರ್ಮಿ ನಾನು ವಾಣಿಯರಸನ ಪೆತ್ತ ವೈಕುಂಠಪತಿ ನೀನುಕ್ಷಣಭಂಗುರ ತನುವಿನ ಗೊಂಬೆ ನಾನು ||3|| ಕಂಬದಲಿ ಬಂದ ಆನಂದ ಮೂರುತಿ ನೀನುನಂಬಿಕೆಯಿಲ್ಲದ ಪ್ರಪಂಚಕನು ನಾನು…
Transliteration
enendu kondadi stutisalo deva nanenu balle nimma mahimegala madhava || pa || hari mukundanu ninu narajanma hulunanu paramatma ninu pamaranu nanu garudagamananu ninu marulu papiyu nanu parama jyotiyu ninu tirupeyava nanu || 1 || kanbadali banda ananda muruti ninu nanbike yillada prapanciganu nanu anbarishage olida akrura saka ninu danbakarmiyu nanu nirjitanu nanu || 2 || tirupati vasa sri venkatesa…