Haridasa Sahitya — Vyasadasa
Endu sairisiri sri krishnana tappa
ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ
Composer: Kanakadasaru · Deity: Krishna / Govinda / Mukunda · Genre: Bhakti
Kannada lyrics
ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ ಮುಂದಕೆ ನಿಮ್ಮ ಮನೆಗೆ ಬಾರನಮ್ಮ|| ಮಗುವು ಬಲ್ಲುದೆ ಇಷ್ಟು ಬೆಣ್ಣೆಯ ಕದ್ದರೆಬಿಗಿಯ ಬಹುದೇ ಶ್ರೀ ಚರಣವನು| ಅಗಣಿತ ಮಹಿಮನ ಅಂಜಿಸಲೇಕಮ್ಮಬಗೆಯ ಬಾರದೆ ನಿಮ್ಮ ಮಕ್ಕಳಂತೆ ||1|| ಹಸುಮಗುವನು ಕಂಡು ಮುದ್ದಿಸಲೊಲ್ಲದೆಹುಸಿಗ ಕಳ್ಳನೆಂದು ಕಟ್ಟುವಿರಿ| ವಸುಧೆಯೊಳಗೆ ನಾನೊಬ್ಬಳೆ ಪಡೆದೆನೆ ನಿಮ್ಮಹಸು ಮಗುವಿನಂತೆ ಭಾವಿಸಬಾರದೆ ||2|| ಎಷ್ಟು ಸಾರಿಯು ನಾ ಬೇಡವೆಂದರೆ ಕೇಳದುಷ್ಟ ಮಕ್ಕಳ ಕೂಡೆ ಒಡನಾಟವ| ಕಟ್ಟಿದ ನೆಲುವಿನ ಬೆಣ್ಣೆಯನೀವೆನುಬಿಟ್ಟು ಕಳುಹಿರಮ್ಮ ಆದಿಕೇಶವನ ||3||
Transliteration
Endu sairisiri sri krishnana tappa Mundake nimma manege baranamma Maguvu ballude ishtu benneya kaddare Bigiyabahude shricharanavanu Aganita mahimana anjisalekamma Bageyabarade nimma makkalante |1| Hasu maguvanu kandu muddisalollade Pusiga kallanendu kattuviri Vasudheyolage nanobbale padedene nimma Hasumaguvendu bhavisabarade |2| Eshto bariyu na bedavendaru kela Dushta makkala kuda odanatava Kattid…