Haridasa Sahitya — Vyasadasa
Endoo kaambeno paanduranga
ಎಂದು ಕಾಂಬೆನು ಪಾಂಡುರಂಗ
Composer: Jagannatha Dasaru · Deity: Vitthala · Genre: Dasara Pada
Kannada lyrics
ಎಂದು ಕಾಂಬೆನು ಪಾಂಡುರಂಗ ಮೂರುತಿಯಾ ಇಂದು ಭಾಗನಿವಾಸ ನರನ ಸಾರಥಿಯ ||pa|| ಅರುಣಾಬ್ಜೋಪಮ ಚಾರು ಚರಣಾಂಗುಲಿ ನಖರ ತರುಣೀಂದುಚ್ಛವಿ ತಿರಸ್ಕರಿಸುವ ಪ್ರಖರ ಕಿರುಗೆಜ್ಜೆ ಕಡಗ ನೂಪುರ ಪೆಂಡೆ ಶಫರ ತೆರಜಾನು ಜಂಘೆ ಭಾಸ್ಕರ ರತ್ನ ಮುಕುರ||1|| ರಂಭಾ ಪೋಲುವ ಊರು ಪೊಂಬಣ್ಣಾಂಬರವ ಕುಂಭೀ ಮಸ್ತಕದೊಲ್ ನಿತಂಬದಿ ಪೊಳೆವ ಕಂಬು ಮೇಖಳಕಂಜ ಗಂಭೀರ ನಾಭೀ ಅಂಬುಧಿಶಾಯಿ ವಿಧಿ ಶಂಭು ಪೂಜಿತನ||2|| ಲವಕುಕ್ಷಿತ್ರವಳಿ ಬಾರ್ಗವಿ ವಕ್ಷ ಉರವು ದ್ರವಿಪೋಲುವ ಕೌಸ್ತುಭ ವೈಜಯಂತಿಯ ಸುವಿಶಾಲ ವಕ್ಷದೊಳ್ ವಿವಿಧ ಹಾರಗಳು ನವನೀತ ಚೋರ ಶ್ರೀ ಪವಮಾನಾರ್ಚಿತನ||3|| ಪದಕ ಸರಿಗೆಯ ಜಾಂಬೂನದ ಕಂಬುಕಂಠ ರದನೀಕರ ಬಾಹು ಚದುರ ಭುಜಕೀರ್ತಿ ಬದರ ಸಂಕಾಶಾ ಅಂಗ…
Transliteration
Endoo kaambeno paanduranga moorutiya | Indoo bhaaganivaasa narana saarathiyaa || pa || Arunaabjo bamachaaru charanaanguli nakharaa | Tarunendu Chaviteera skarisuva prakharaa | Kiru gejje kadaga noopura pende shaphara | Tadeganji Jaanu baasu ratna mukhura || 1 || Rambhaa poluva ooru pombannaambaravaa | Tumbi mastakadol nitambadi polevaa | Kambu mekhala kanja gambheera naabhi | Ambudhi shaayi vidhi…