Haridasa Sahitya — Vyasadasa
Endigahudo nanna darusana
ಎಂದಿಗಾಹುದೋ ನಿನ್ನ ದರುಶನ
Composer: Vijaya Dasaru · Deity: Hari · Genre: Bhakti
Kannada lyrics
ಎಂದಿಗಾಹುದೋ ನಿನ್ನ ದರುಶನ ।।ಪ॥ ಇಂದಿರೇಶ ಮುಕುಂದ ಕೇಶವ ।।ಅ.ಪ॥ ಗಾನಲೋಲನೆ ದೀನವತ್ಸಲ ಮಾನದಿಂದಲಿ ನೀನೆ ಪಾಲಿಸೋ ।।೧।। ಯಾರಿಗೆ ಮೊರೆ ಇಡುವೆ ಶ್ರೀಹರಿ ಸಾರಿ ಬಂದು ನೀ ಈಗಲೇ ಪೊರಿ ।।೨।। ಗಜವ ಪಾಲಿಸೊ ಗರುವದಿಂದಲಿ ಭುಜಗಶಯನ ಶ್ರೀ ವಿಜಯವಿಠಲಾ ।।೩।।
Transliteration
Endigahudo ninna darusana ||pa|| Indiresa mukunda kesava ||a.pa|| Ganalolane dinavatsala Manadindali nine paliso ||1|| Yarige more iduve srihari Sari bandu ni igale pori ||2|| Gajava paliso garuvadimndali Bujagasayana sri vijayavithala ||3||