Haridasa Sahitya — Vyasadasa

Endigadaru ninna padara-

ಎಂದಿಗಾದರು ನಿನ್ನ ಪಾದಾರ-

Composer: Purandara Dasaru · Deity: Hari · Genre: Ugabhoga

Kannada lyrics

ಎಂದಿಗಾದರು ನಿನ್ನ ಪಾದಾರ- ವಿಂದವೆ ಗತಿಯೆಂದು ನಂಬಿದೆನೊ ಬಂಧುಬಳಗವ ಬಿಟ್ಟು ಬಂದೆ ನಿನ್ನ ಮನೆಗಿಂದು , ಮಂದರಧರ ಗೋವಿಂದ ಪುರಂದರವಿಠಲನೆ ನೀ ಬಂಧು | ಅನ್ಯರೊಬ್ಬರ ಕಾಣೆ ಮನ್ನಿಸುವರೆನ್ನ ಆಪನ್ನರಕ್ಷಕನೆ ಪರಿಪಾಲಿಸು ಇನ್ನು ಪನ್ನಂಗಶಯನ ಶ್ರೀ ಪುರಂದರವಿಠಲನೆ ಬಾರಿಬಾರಿಗೆ ನಿನ್ನ ಚರಣಕ್ಕೆ ಶರಣೆಂದೆ ಭಾರತಿರಮಣನೆ ಬಾರೊ ಮನೆಗಿಂದು ತಂದೆ ಶ್ರೀಪುರಂದರವಿಠಲರಾಯನೆ ಎಂದೆಂದಿಗು ನೀನೆ ಜಗಕೆ ಬಂಧು

Transliteration

Endigadaru ninna padara- Vindave gatiyendu nambideno Bandhubalagava bittu bande ninna manegindu , Mandaradhara govinda purandaravithalane ni bandhu | Anyarobbara kane mannisuvarenna apannarakshakane paripalisu Innu pannamgasayana sri purandaravithalane Baribarige ninna caranakke saranemde baratiramanane baro manegindu Tande sripurandaravithalarayane endendigu nine jagake bandhu ||