Haridasa Sahitya — Vyasadasa

Endiddari kompe enage nambikeyilla

ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ

Composer: Kanakadasaru · Deity: Hari · Genre: Philosophy

Kannada lyrics

ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ ಮುಂದರಿತು ಹರಿಪಾದ ಹೊಂದುವುದು ಲೇಸು ।।ಪ।। ಎಲುವುಗಳು ತೊಳೆ ಜಂತೆ ನರಗಳವು ಬಿಗಿದಂತೆ ಬಲಿದ ಚರ್ಮವು ಮೇಲು ಹೊದಿಕೆಯಂತೆ ಗಳಗಳನೆ ನುಡಿವ ನಾಲಗೆ ಗಂಟೆಯುಲಿಯಂತೆ ಕೆಲಕಾಲಕೀ ಕೊಂಪೆ ಕಡೆಗಾಹುದಂತೆ ।।೧।। ಕಂಡಿಗಳು ಒಂಬತ್ತು ಕಳಬಂಟರೈವರು ಅಂಡಲೆವುದೊತ್ತಿನಲಿ ಷಡುವರ್ಗವು ಮಂಡಲಕೆ ಹೊಸಪರಿಯು ಮನ್ಮಥನ ಠಾಣ್ಯವಿದು ಮಂಡೆಹೋಗುವುದನ್ನು ಅರಿಯದೀ ಕೊಂಪೆ ।।೨।। ಕೊಂಪೆಯಲಿ ಶೃಂಗಾರ ಕೊಂಡಾಡಲಳವಲ್ಲ ಕೆಂಪುಬಣ್ಣಗಳಿಂದ ಚೆನ್ನಾಯಿತು ಇಂಪಿನಲಿ ಕಾಗಿನೆಲೆಯಾದಿಕೇಶವನನ್ನು ಸೊಂಪಿನಲಿ ನೆನೆನೆನೆದು ಸುಖಿಯಾಗೋ ಮನುಜಾ ।।೩।।

Transliteration

Endiddari kompe enage nambikeyilla Mundaritu haripada honduvudu lesu ||pa|| Eluvugalu tole jante naragalavu bigidante Balida charmavu melu hodikeyante Galagalane nudiva nalage ganteyuliyante Kelakalaki kompe kadegahudante ||1|| Kandigalu ombattu kalabamtaraivaru Andalevudottinali shaduvargavu Mandalake hosapariyu manmathana thanyavidu Mandehoguvudannu ariyadi kompe ||2|| Kompeyali srungara kondada…