Haridasa Sahitya — Vyasadasa
Enanti kamalanabana
ಏನಂತಿ ಕಮಲನಾಭನ
Composer: Harapanahalli Bheemavvanavaru · Deity: Lakshmi Devi · Genre: Bhakti
Kannada lyrics
ಏನಂತಿ ಕಮಲನಾಭನ ಪ್ರಿಯಳೆ ಜಗ- ದಾನಂತ ಪದುಮನಾಭನ ಭಾರ್ಯಳೆ ||pa|| ಕ್ಷೀರ ಸಾಗರತನುಜೆ ಸಿರಿ ಎನ್ನ ಮೊರೆ ಕೇಳೆ ಸಿದ್ಧವಾಗೆನಗ್ಹೇಳೆ ಶುದ್ಧ ಮಾರ್ಗವ ತೋರೆ ಬುದ್ಧಿಪೂರ್ವಕವಾಗಿ ಭುವನದೊಡೆಯನ ಪಾದ- ಪದ್ಮದಲ್ಲಾಸಕ್ತೆ ಬುದ್ಧಿ ಕೇಳುವೆ ಶಾಂತಿ||1|| ಜನಕಾತ್ಮಜಳೆ ನೀ ಜಗದೇಕ ಸುಂದರಿ ಜಗದಾಧಿಪತಿ ವಕ್ಷಸ್ಥಳ ಆಶ್ರಯಳೆ ಕೃತಿ ಸರ್ವಮಂಗಳಕಾರಿ ಪರಮ ಕರುಣದಿ ನೋಡೆ ವರಲಕ್ಷ್ಮಿ ದಯಮಾಡೆ ವರಗಳನೀಡ್ಯಾಡೆ ||2|| ಭೀಷ್ಮಕನ ಪುತ್ರಿ ಬಿರುದೇನೆ ಸರಸಿಜನೇತ್ರೆ ಮೃಡ ಬ್ರಹ್ಮರೊಡೆಯ ಭೀಮೇಶಕೃಷ್ಣನ ಮಿತ್ರೆ ಪೊಡವಿಗಧಿಕಳೆ ಜಯ ಮೂಡಲಗಿರಿವಾಸಿ ಬಿಡದೆ ಕೈ ಹಿಡಿದೆನ್ನ ಕಡೆಹಾಯ್ಸೆ ಕಮಲಾಕ್ಷಿ ||3||
Transliteration
Enanti kamalanabana priyale jaga-dananta padumanabana baryale ||pa|| Siri enna more kele Siddhavagenag~hele Suddha margava tore Buddhipurvakavagi buvanadodeyana pada- Padmadallasakte buddhi keluve santi||1|| Janakatmajale ni jagadeka sumdari Jagadadhipati vakshasthala asrayale kruti Sarvamangalakari parama karunadi node Varalakshmi dayamade varagalanidyade||2|| Bishmakana putri birudene sarasijane…