Haridasa Sahitya — Vyasadasa
Enagu ane ranga
ಎನಗೂ ಆಣೆ ರಂಗ
Composer: Purandara Dasaru · Deity: Hari · Genre: Bhakti
Kannada lyrics
ಎನಗೂ ಆಣೆ ರಂಗ ನಿನಗೂ ಆಣೆ ||ಪ|| ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ ||ಅ.ಪ|| ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ ||೧|| ತನುಮನಧನದಲಿ ವಂಚಕನಾದರೆ ನಿನಗೆ ಆಣೆ ರಂಗ ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ ||೨|| ಕಾಕು ಮನುಜರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ ||೩|| ಶಿಷ್ಟರ ಸಂಗ ಮಾಡದಿದ್ದರೆ ಎನಗೆ ಆಣೆ ರಂಗ ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ||೪|| ಹರಿ ನಿನ್ನಾಶ್ರಾಯ ಮಾಡದಿದ್ದರೆ ಎನಗೆ ಆಣೆ ರಂಗ ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ ||೫||
Transliteration
Enagu ane ranga ninagu ane ||pa|| Enagu ninagu ibbarigu baktarane ||a.pa|| Ninna bittu anyara Bajisidarenage ane ranga Enna ni kai bittu podare ninage ane ||1|| Tanumanadhanadali vanchakanadare ninage ane ranga Manasu ninnali nilisadiddare ninage ane ||2|| Kaku manujara sangava madadiddare enage ane ranga Laukikava bidisadiddare ninage ane ||3|| Sishtara sanga madadiddare enage ane ranga Dushtara…