Haridasa Sahitya — Vyasadasa

Enagobba dore dorakidanu

ಎನಗೊಬ್ಬ ದೊರೆ ದೊರಕಿದನು

Composer: Purandara Dasaru · Deity: Mukhyaprana / Vaayu / Hanuma / Bheema · Genre: Bhakti

Kannada lyrics

ಎನಗೊಬ್ಬ ದೊರೆ ದೊರಕಿದನು ।।ಪ॥ ವನಜ ಸಂಭವನಯ್ಯ ಹನುಮನಂತರಾಸ್ವಾಮಿ ।।ಅ.ಪ॥ ಮಾತಾಪಿತನಾದ ಭ್ರಾತ ಬಾಂಧವನಾದ ಪ್ರೀತಿಯಿಂದಲಿ ತಾನೆ ನಾಥನಾದ ಖ್ಯಾತನು ತಾನಾದ ದಾತನು ತಾನಾದ ಭೂತೇಶವಂದ್ಯ ವಿಭೂತಿಪ್ರದನಾದ ।।೧।। ಅಜರಾಮರನಾದ ಅಪ್ರಾಕೃತನಾದ ವಿಜಯಗೊಲಿದು ನಿಜಸೂತನಾದ ಭುಜಗಶಯನನಾದ ತ್ರಿಜಗವಂದಿತನಾದ ಅಜಾಮಿಳನ ಅಂತ್ಯಕತ್ಯಂತ ಸುಹೃದನಾದ ।।೨।। ಶಂಖ ಚಕ್ರಾಂಕಿತ ಸಂಕರ್ಷಣನಾದ ಬಿಂಕದಿಂದಲಿ ಬಿರುದು ಪೊತ್ತವನಾದ ಪಂಕಜನಯನ ಮೀನಾಂಕ ಜನಕನಾದ ಓಂಕಾರ ಮೂರುತಿ ಪುರಂದರವಿಠಲನಾದ ।।೪।।

Transliteration

Enagobba dore dorakidanu ||pa|| Vanaja sambavanayya hanumanantarasvami ||a.pa|| Matapitanada brata bandhavanada Pritiyimdali tane nathanada Kyatanu tanada datanu tanada Butesavandya vibutipradanada ||1|| Ajaramaranada aprakrutanada Vijayagolidu nijasutanada Bujagasayananada trijagavanditanada Ajamilana antyakatyamta suhrudanada ||2|| Sanka chakrankita sankarshananada Binkadimdali birudu pottavanad…