Haridasa Sahitya — Vyasadasa

Ena pelale gopi ninna magana

ಏನ ಪೇಳಲೆ ಗೋಪಿ ನಿನ್ನ ಮಗನ

Composer: Purandara Dasaru · Deity: Krishna / Govinda / Mukunda · Genre: Bhakti

Kannada lyrics

ಏನ ಪೇಳಲೆ ಗೋಪಿ ನಿನ್ನ ಮಗನ ಜಾಲ ಮಾನ ತಪ್ಪಿ ಬಂದ ಮನೆಯೊಳಗೆ ||pa|| ಕೊಡ ಹಾಲು ಕುಡಿದನೆ ಗಡಿಗೆಯ ಒಡೆದನೆ ಅಡಗಿದ್ದನೆ ದೊಡ್ಡ ಕೊಡದೊಳಗೆ ಹುಡುಗ ಸಿಕ್ಕಿದನೆಂದು ಹೊಡೆಯ ಹೋದರೆ ಬಡವರ ಮಗನೇನೆ ಹೊಡೆಯಲಿಕ್ಕೆ ||1|| ಅಳಿಯನ ವೇಷದಿ ಮಗಳ ಕರೆಯ ಬಂದ ಕಲಹ ಮಾಡಿ ತಾ ಕಳಿಸೆಂದ ಒಲುಮೆಯಿಂದಲಿ ತಿಂಗಲೆರಡಿಟ್ಟುಕೊಂಡರೆ ಗಿಳಿಯಂಥ ಹೆಣ್ಣಿನ ಕೆಡಿಸಿದನೆ ಗೋಪಿ ||2|| ಇಷ್ಟೊಂದು ಸಿಟ್ಟೇಕೆ ಚಿಣ್ಣ ಕೃಷ್ಣನ ಮೇಲೆ ಪುಟ್ಟಿಸಬೇಡಿರೆ ಅನ್ಯಾಯವ ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ್ನ ದೃಷ್ಟಿಸಿ ನೋಡಿರೆ ತೊಟ್ಟಿಲಿನೊಳಗೆ ||3|| Ena pelale gopi ninna magana jala Mana tappi banda maneyolage ||pa||

Transliteration

Koda halu kudidane gadigeya odedane Adagiddane dodda kodadolage Huduga sikkidanendu hodeya hodare Badavara maganene hodeyalikke ||1|| Aliyana veshadi magala kareya banda Kalaha madi ta kalisemda Olumeyindali timgaleradittukondare Giliyantha hennina kedisidane gopi ||2|| Ishtondu sitteke cinna krushnana mele Puttisabedire anyayava Srushtigodeya namma purandaravithalanna Drushtisi nodire tottilinola…