Haridasa Sahitya — Vyasadasa
Ena bedali ninna balige bandu
ಏನು ಬೇಡಲಿ ನಿನ್ನ ಬಳಿಗೆ ಬಂದು
Composer: Gopala Dasaru · Deity: Hari · Genre: Vairagya
Kannada lyrics
ಏನು ಬೇಡಲಿ ನಿನ್ನ ಬಳಿಗೆ ಬಂದು ನೀನಿಟ್ಟ ಸೌಭಾಗ್ಯ ನಿಬಿಡವಾಗಿದೆ ಎನಗೆ || ಪ || ಜನನಿಯ ಕೊಡು ಎಂದು ಜಯವಂತ ಬೇಡುವೆನೆ ಜನನಿ ಏನಿತ್ತಳಾ ಧ್ರುವರಾಜಗೆ ಜನಕನ ಕೊಡು ಎಂದು ಜಗದೀಶ ಬೇಡುವೆನೆ ಜನಕನೇನಿತ್ತನಾ ಪ್ರಹ್ಲಾದಗೆ || ೧ || ಅನುಜನ ಕೊಡು ಎಂದು ಅತಿಶಯದಿ ಬೇಡುವೆನೆ ಅನುಜನೇನಿತ್ತನಾ ವಾಲಿಗೆ ಧನವನೇ ಕೊಡು ಎಂದು ದೈನ್ಯದಲಿ ಬೇಡುವೆನೆ ಧನ ಗಳಿಸಿದ ಸುಯೋಧನನೇನಾದ ಕೊನೆಗೆ || ೨ || ಸತಿಯಳ ಕೊಡು ಎಂದು ಮತಿವಂತ ಬೇಡುವೆನೆ ಸತಿಯಿಂದ ದುನ್ಯಾಮಕನೇನಾದ ಕೊನೆಗೆ ಸುತರುಗಳ ಕೊಡು ಎಂದು ಸತತದಲಿ ಬೇಡುವೆನೆ ಸುತರಿಂದ ಧೃತರಾಷ್ಟ್ರ ಗತಿಯೇನು ಕಂಡ || ೩ || ಬೇಡುವೆನು ನಾನಿಂದು ಬೇಡತಕ್ಕುದೆ ದೇವಾ ನೀಡೆನೆಂಬುದು ನಿನ್ನ ಮನದೊ…
Transliteration
Ena bedali ninna balige bandu Ninitta saubhagya nibidavagide enage ||P|| Jananiya kodu emdu jayavamta beduvene Janani enittala dhruvarayage Janakana kodu emdu jagadisa beduvene Janakanenittana prahladage ||1|| Anujana kodu eNdu atisayadi beduvene Anujanenittanai A valige dhanavanne Kodu endu dainyadali beduvene Dhanava galisida suyodhananenadanu ||2|| Satiyala kodu endu mativanmta beduvene Satiyim…