Haridasa Sahitya — Vyasadasa
Elu sri gururaya
ಏಳು ಶ್ರೀ ಗುರುರಾಯ
Composer: Prasanna Venkata Dasaru · Deity: Raghavendra Teertharu · Genre: Dasara Pada
Kannada lyrics
ಏಳು ಶ್ರೀ ಗುರುರಾಯ ಬೆಳಗಾಯಿತಿ೦ದು ಧೂಳಿದರುಶನವ ಕೊಡಿರಿ ಈ ವೇಳೆ ಶಿಷ್ಯರಿಗೆ || ಪ || ಏಳು ಗುರುರಾಘವೇ೦ದ್ರ-ಏಳು ದಯಾಗುಣಸಾ೦ದ್ರ ಏಳು ವೈಷ್ಣವ ಕುಮುದಕೆ ಚ೦ದ್ರ ಶ್ರೀ ರಾಘವೇ೦ದ್ರ || ಅ || ಅಶನ ವಸನಗಳಿಲ್ಲವೆ೦ಬ ವ್ಯಸನಗಳಿಲ್ಲ ಮುಸುಕು ಹಾಕಿ ಮೋಸದೆಲೆ ಮೋಹಿಸಿದೆನಲ್ಲ ಅಸುರಾರಿಯ ಸ್ಮರಿಸದೆ ಪಶುವಿನವೊಲು ಈ ದೇಹ ವಸುಮತಿಯೊಳು ಬಹಳ್ಹಸಗೆಟ್ಟಿತಲ್ಲ. || ೧ || ನಾನು ನನ್ನದು ಎ೦ದು ಹೀನ ಮನಸಿಗೆ ತ೦ದು ಏನು ಮಾಡುವ ಕರ್ಮ ನಾನೇ ಅಹುದೆ೦ದು ಸ್ವಾಮಿ ಕರ್ತೃತ್ವವನು ತಿಳಿಯಲಿಲ್ಲ ನಾನೆ೦ದು ನೀನೆ ಉಧ್ಧರಿಸಯ್ಯ ದೀನದಯಾಸಿ೦ಧೋ || ೨ || ಅನ್ಯರಕೈಯಲಿ ನಿನ್ನವರನಿರಿಸುವುದು ಅನ್ಯಾಯವಾಯ್ತು ಪಾವನ್ನ ಗುರುರಾಯ ಎನ್ನ ಮಾತಲ್ಲವಿದು…
Transliteration
Elu sri gururaya belagayitindu Dhulidarusanava kodiri I vele sishyarige || pa || Elu gururagavendra-elu dayagunasandra Elu vaishnava kumudake candra sri ragavendra || a || Asana vasanagalillavenba vyasanagalilla Musuku haki mosadele mohisidenalla Asurariya smarisade pasuvinavolu I deha Vasumatiyolu bahalhasagettitalla. || 1 || Nanu nannadu endu hina manasige tandu Enu maduva karma nane ahudendu Sv…