Haridasa Sahitya — Vyasadasa
Elu narayana elu lakshmiramana
ಏಳು ನಾರಾಯಣ ಏಳು ಲಕ್ಷ್ಮೀರಮಣ
Composer: Kanakadasaru · Deity: Narayana · Genre: Bhakti
Kannada lyrics
ಏಳು ನಾರಾಯಣ ಏಳು ಲಕ್ಷ್ಮೀರಮಣ ಏಳು ಶ್ರೀಗಿರಿಗೊಡೆಯ ಶ್ರೀವೆಂಕಟೇಶ ಏಳಯ್ಯ ಬೆಳಗಾಯಿತು || ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟು ಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆ ಶೇಷಶಯನನೆ ಏಳು ಸಮುದ್ರ ಮಂಥನವ ಮಾಡು ದೇಶ ಕೆಂಪಾಯಿತು ಏಳಯ್ಯ ಹರಿಯೇ || ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ ಸುರರು ತಂದಿದ್ದಾರೆ ಬಲು ಭಕುತಿಯಿಂದ ಅರವಿಂದನಾಭ ಸಿರಿವಿಧಿಭವಾದಿಗಳೊಡೆಯ ಹಿರಿದಾಗಿ ಕೋಳಿ ಕೂಗಿತೇಳಯ್ಯ ಹರಿಯೇ || ದಾಸರೆಲ್ಲರು ಬಂದು ಧೂಳಿನದರ್ಶನಕೊಂಡು ಲೇಸಾಗಿ ತಾಳ ದಂಡಿಗೆಯ ಪಿಡಿದು ಶ್ರೀಶನೆಲೆಯಾದಿ ಕೇಶವ ನಿಮ್ಮ ಪಾದವನು ಲೇಸಾಗಿ ಸ್ಮರಿಸಿ ಪೊಗಳುವರು ಹರಿಯೇ ||
Transliteration
Elu narayana elu lakshmiramana ||pa|| Elu srigiri odeya srivenkatesa Elayya belagayitu ||a.pa|| Kasidda halannu kavadiyolu heppittu Lesagi kadedu hosabenne koduve Seshasayanane elu samudra mathanava madu Desa kempayitu elayya hariye ||1|| Aralu mallige jaji parimalada pushpagala Suraru tandiddare balu Bakutiyinda Aravindanaba siri vidhibavadigalodeya Hiridagi koli kugitelayya hariye ||2|| Dasarell…