Haridasa Sahitya — Vyasadasa
Ellyaadi bandyo nee
ಎಲ್ಯಾಡಿ ಬಂದ್ಯೋ ನೀ
Composer: Sripadarajaru · Deity: Krishna · Genre: Dasara Pada
Kannada lyrics
ಎಲ್ಯಾಡಿ ಬಂದ್ಯೋ ನೀ ಹೇಳಯ್ಯ ನಿಲ್ಲು ನಿಲ್ಲು ಗೋಪಾಲ ಕೃಷ್ಣಯ್ಯ ||ಪ|| ನೊಸಲಲ್ಲಿ ಕಿರುಬೆವರಿಟ್ಟಿದೆ ಅಲ್ಲಿ ಹೊಸಪರಿ ಸುದ್ದಿಯು ಹುಟ್ಟಿದೆ ಪುಸಿಯಲ್ಲ ಈ ಮಾತು ನಿನ್ನ ನಸುನಗೆ ಕೀರ್ತಿ ಹೆಚ್ಚಿದೆ ಬೆರಳ ಉಂಗುರವೆಲ್ಲಿ ಹೋಗಿದೆ ನಿನ್ನ ಕೊರಳ ಪದಕವೆಲ್ಲಿ ನೀಗಿದೆ ಸರಕೆಲ್ಲ ಅವಳಲ್ಲಿ ಸಾಗಿದೆ ಆ ತರುಣಿ ಮಹಿಮೆ ಹೀಂಗಾಗಿದೆ ಕಳ್ಳತನವ ಹೀಗೆ ಮಾಡಿದೆ ನಿನ್ನ ಸುಳ್ಳು ಕಡೆಗೆ ನಾ ನೋಡಿದೆ ಎಲ್ಲರಿಗೂ ಠಕ್ಕು ಮಾಡಿದೆ ಚಲುವ ರಂಗವಿಠಲ ನಗೆಗೀಡಾದೆ
Transliteration
Ellyaadi bandyo nee helayyaa | nillu nillu gopaalakrushnayya || pa || Nosalalli kirubevarittide alli | hosapariya suddiyu huttide | pusiyalla ee maatu muttide ninna | nasunage keerti heccide || 1 || Berala unguravelli hogide ninna | korala padakavelli neegide | sarakella avalalli saagide aa | taruni mahime heengaagide || 2 || Kallatanava heege maadide ninna | sullu kadege naa nodide | ellarigoo Th…