Haridasa Sahitya — Vyasadasa
Elliruvano ranga emba samsaya beda
ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ
Composer: Kanakadasaru · Deity: Hari · Genre: Philosophy
Kannada lyrics
ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ || ಪ || ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು|| ಅ || ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು ಭರದೊದೆಯಲವನಪಿತ ಕೋಪದಿಂದ ಸ್ಥಿರವಾದೊಡೀ ಕಂಭದಲಿ ತೋರು ತೋರೆನಲು ಭರದಿಂದ ಬರಲದಕೆ ವೈಕುಂಠ ನೆರೆಮನೆಯೇ ?|| ೧ || ಪಾಪಕರ್ಮವ ಮಾಡಿದಜಮಿಳನ ಯಮಭಟರು ಕೋಪದಿಂದೆಳೆಯುತಿರೆ ಭೀತಿಯಿಂದ ತಾ ಪುತ್ರನನು ಕರೆಯೆ ಕೇಳಿ ರಕ್ಷಿಸೆ ಶ್ವೇತದ್ವೀಪವೀ ಧರೆಗೆ ಸಮೀಪದಲ್ಲಿಹುದೇ ?|| ೨ || ಕರಿರಾಜನನು ನೆಗಳು ನುಂಗುತಿರೆ ಭಯದಿಂದ ಮೊರೆಯಿಡಲು ಕೇಳಿ ತ್ವರಿತದಲಿ ಬಂದು ಕರುಣದಲಿ ಬಂದವನ ಪರಿಹರಿಸೆ ಗಜರಾಜ ನಿರುವ ಸರಸಿಯು ಅನಂತಾಸನಕೆ ಮುಮ್ಮನೆಯೆ ?|| ೩ || ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ…
Transliteration
Elliruvano ranga emba samsaya beda ||pa|| Elli Baktaru kareye alli bandodaguvanu ||a.pa|| Tarala prahlada hari visvamayanendu Baradodeyalavanapita kopadinda Sthiravadoli kambadali toru torenalu Baradinda baraladake vaikuntha neremaneye ||1|| Kurupatiyu draupadiya sireyanu seleyutire Taruni ha krushna endare keldu Baradimda akshayambaraviye hastina Purige dvaravatiyu kugalateye ||2|| Anuhottinolell…