Haridasa Sahitya — Vyasadasa
Elliddarenu sriharigalladavanu
ಎಲ್ಲಿದ್ದರೇನು ಶ್ರೀಹರಿಗಲ್ಲದವನು
Composer: Vijaya Dasaru · Deity: Hari · Genre: Bhakti
Kannada lyrics
ಎಲ್ಲಿದ್ದರೇನು ಶ್ರೀಹರಿಗಲ್ಲದವನು ।।ಪ।। ನಿಲ್ಲದೆ ಜಪಿಸಿದರೆ ಸಲ್ಲುವನೆ ಸದ್ಗತಿಗೆ ಕಪ್ಪೆ ಕಮಲದ ಬಳಿಯೆ ತಪ್ಪದೆ ಅನುಗಾಲ ಇಪ್ಪುದೈ ಒಂದು ಅರೆಘಳಿಗೆ ಬಿಡದೆ ಒಪ್ಪದಿಂದಲಿ ಅದರ ಪರಿಮಳದ ಸೊಬಗನೀ ಕಪ್ಪೆ ವಾಸನೆಗೊಂಡು ಹರುಷಪಡಬಲ್ಲುದೆ ।।೧।। ಹಾಲುಕೆಚ್ಚಲು ಬಳಿಯೆ ತೊಣಸಿ ಹತ್ತಿಕೊಂಡು ಕಾಲವನು ಕಳೆವ ಬಗೆ ಬಲ್ಲಿರೆಲ್ಲ ವೇಳೆ ವೇಳೆಗೆ ಹಸುವ ಕರೆದುಂಬ ನರನಂತೆ ಕೀಳು ತೊಣಸಿಯು ಉಂಡು ಹರುಷಪಡಬಲ್ಲುದೆ ।।೨।। ತುಳಸಿ ಸಾನ್ನಿಧ್ಯದಲಿ ನೀರುಳ್ಳಿಯನು ಹಾಕಿ ಹೊಲಸು ಹೋಗ್ವುದೆ ಹಲವು ಕಾಲಿದ್ದರೆ ತಿಳಿವಳಿಕೆ ಇಲ್ಲದವ ಸಿರಿ ವಿಜಯವಿಠ್ಠಲನ ಬಳಿಯಲಿದ್ದರೇನು ದೂರಿದ್ದರೇನು ।।೩।।
Transliteration
Elliddarenu sriharigalladavanu ||pa|| Nillade japisidare salluvane sadgatige ||a.pa|| Kappe kamalada baliye tappade anugala Ippudai ondu aregalige bidade Oppadindali adara parimalada sobagani Kappe vasanegondu harushapadaballude ||1|| Halukeccalu baliye tonasi hattikondu Kalavanu kaleva bage ballirella Vele velege hasuva karedumba naranante Kilu tonasiyu undu harushapadaballude ||2|| Tulasi sannid…