Haridasa Sahitya — Vyasadasa
Elli shri tulasiya
ಎಲ್ಲಿ ಶ್ರೀ ತುಳಸಿಯ
Composer: Purandara Dasaru · Deity: Tulasi · Genre: Bhakti
Kannada lyrics
ಎಲ್ಲಿ ಶ್ರೀ ತುಳಸಿಯ ವನವು |ಅಲ್ಲೊಪ್ಪುವರು ಸಿರಿ-ನಾರಾಯಣರು || ಗಂಗೆ ಯಮುನೆ ಗೋದಾವರಿ ಕಾವೇರಿ |ಕಂಗೊಳಿಸುವ ಮಣಿಕರ್ಣಿಕೆಯು || ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲ |ಸಂಗಡಿಸುತ ವೃಕ್ಷಮೂಲದಲ್ಲಿರುವುವು || ಸರಸಿಜಭವಭವಸುರಪಪಾವಕಚಂ-|ದಿರಸೂರ್ಯಮೊದಲಾದವರು || ಸಿರಿರಮಣನ ಆಜೆÕಯಲಿ ಅಗಲದಂತೆ |ತರುಮಧ್ಯದೊಳುನಿತ್ಯನೆಲಸಿಪ್ಪರು|| ಋಗ್ವೇದ ಯಜುರ್ವೇದಸಾಮಅಥರ್ವಣ |ಅಗ್ಗಳಿಸಿದ ವೇದಘೋಷಗಳು || ಅಗ್ರಭಾಗದಲಿವೆ ಬೆಟ್ಟದೊಡೆಯನಲ್ಲಿ |ಶ್ರೀಘ್ರದಿ ಒಲಿವ ಶ್ರೀಪುರಂದರವಿಠಲ||
Transliteration
Elli shri tulasiya vanavu alli oppuvaru siri narayanaru Gangee yamune godavari kaveri gangolisuva mani karnikeyu Tungabhadre krsnaveni tirtagalella mungadisuva mula vrksadaliruvaru||1|| Sarasija bhava surapa pavana candira surya modaladavaru Siri ramanana Ajnyadi agaladande taru madhyadolu nitya nelisipparu||2|| Rgveda yajurveda sama atharvana aghavalisuva veda ghosagalu Agra bhagadallide pettadod…