Haridasa Sahitya — Vyasadasa

Elli mayavadane rangayyanu

ಎಲ್ಲಿ ಮಾಯಾವಾದನೆ ರಂಗಯ್ಯನು

Composer: Vyasarajaru · Deity: Krishna / Govinda / Mukunda · Genre: Bhakti

Kannada lyrics

ಎಲ್ಲಿ ಮಾಯಾವಾದನೆ ರಂಗಯ್ಯನು ಎಲ್ಲಿ ಮಾಯಾವಾದನೆ||pa|| ಎಲ್ಲಿ ಮಾಯಾವಾದ ಫುಲ್ಲನಾಭಕೃಷ್ಣ| ಚೆಲ್ಲೆ ಗಂಗಳೆಯರು ಹುಡುಕ ಹೋಗುವ ಬನ್ನಿ ||a.pa|| ಮಂದ ಗಮನೆಯರೆಲ್ಲ ಕೃಷ್ಣನ ಕೂಡೆಚೆಂದದಿ ಇದ್ದೆವಲ್ಲ ಕಂದರ್ಪ ಬಾಧೆಗೆ ಗುರಿಯ ಮಾಡಿದನಲ್ಲಮಂದಮತಿ ನಮಗೆ ಬಂದು ಒದಗಿತಲ್ಲ ||1|| ಸರಸಿಜಾಕ್ಷಿಯರು ಕೂಡಿ ಕೃಷ್ಣನ ಕೂಡೆಸರಸವಾಡುತಲಿದ್ದೆವೆ| ಕರೆಕರೆಗೊಳಿಸಿ ಮನ್ಮಥ ಬಾಧೆಗೊಪ್ಪಿಸಿಚರಣ ಸೇವಕರಾದ ತರಳೆಯರನು ಬಿಟ್ಟು ||2|| ಭಕ್ತವತ್ಸಲ ದೇವನು ತನ್ನವರನ್ನುಅಕ್ಕರದಲಿ ಪೊರೆವನು ಸಿಕ್ಕದೆ ಹೋಗನು ಹುಡುಕುತ್ತ ಹೋಗುವಅಕ್ಕಯ್ಯ ಬನ್ನಿರೆ ಉಡುಪಿ ಶ್ರೀಕೃಷ್ಣನು ||3||

Transliteration

Elli mayavadane rangayyanu ||pa|| Elli mayavada pulanaba krushna Calvagamgaleyaru hudukahoguva banni ||a.pa|| Mandagamaneyarella krushnana kude Chandadi iddevalla Kamndarpana badhege guriya madidanalla Mandamatiyu namage bandu odagitalla ||1|| Sarasijakshiyaru kudi krushnana kude Sarasavadutaliddeve Karekaregolisi manmatha badhegoppisi Carana sevakarada tarunirille bittu ||2|| Baktavatsaladevanu t…