Haridasa Sahitya — Vyasadasa

Ellaru maduvudu hottegagi

ಎಲ್ಲಾರು ಮಾಡುವುದು ಹೊಟ್ಟೆಗಾಗಿ

Composer: Kanakadasaru · Deity: Hari · Genre: Advice

Kannada lyrics

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ।।ಪ ।। ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆ ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||1|| ಚಂಡಭಟರಾಗಿ ನಡೆದು ಕತ್ತಿ ಡಾಲು ಕೈಲಿ ಹಿಡಿದು ಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||2|| ಅಂಗಡಿ ಮುಂಗಟ್ಟನ್ನ ಹೂಡಿ ವ್ಯಂಗ ಮಾತುಗಳನ್ನ ಅಡಿ ಭಂಗಬಿದ್ದು ಗಳಿಸಿವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||3|| ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿ ರಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||4|| ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳುಮಾಡಿ ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ…

Transliteration

ellAru mADuvudu hoTTegAgi gENubaTTegAgi ||pa|| vEdaSAstra pancAngava OdikonDu anyarige bOdhaneya mADuvudu hoTTegAgi gENubaTTegAgi ||1|| canDaBaTarAgi naDedu katti DAlu kaili hiDidu KanDa tunDa mADuvudu hoTTegAgi gENubaTTegAgi ||2|| angaDi mungaTTanna hUDi vyanga mAtugaLanna aDi Bangabiddu gaLisivudu hoTTegAgi gENubaTTegAgi ||3|| kunTe tudige koraDu hAki henTe maNNu samanu mADi ranTe hoDedu beLesuv…