Haridasa Sahitya — Vyasadasa
Eke mamathe kottu
ಏಕೆ ಮಮತೆ ಕೊಟ್ಟು
Composer: Gopala Dasaru · Deity: Hari · Genre: Philosophy
Kannada lyrics
ಏಕೆ ಮಮತೆ ಕೊಟ್ಟು ದಣಿಸುವಿ ರಂಗ ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ || ಪ. || ನಿನ್ನ ಹಂಬಲಿಸದೆ ಅನ್ಯ ವಿಷಯಗಳಿ– ಗೆನ್ನನೊಪ್ಪಿಸುವುದು ನೀತವೆ ಮನ್ನಿಸಿ ದಯದಿ ನೀ ಎನ್ನ ಪಾಲಿಸಲು ನಾ ನಿನ್ನ ನೇಮಕೆ ಪ್ರತಿಕೂಲನೆ || ೧ || ತನುವು ತನ್ನದು ಅಲ್ಲ ತನು ಸ೦ಬ೦ಧಿಗಳೆ೦ಬೋ ತನುವ್ಯಾರೊ ತಾನ್ಯಾರೊ ಅವರಿಗೆ ಧನ ಮೊದಲಾದ ವಿಷಯಗಳ ಅನುಭವ ಹಿ೦ದಿನ ದೇಹದ೦ತಲ್ಲವೆ || ೨ || ಇ೦ದ್ರಿಯ೦ಗಳು ವಿಷಯದಿ೦ದ ತೆಗೆಯಲು ಗೋವಿ೦ದ ಎನ್ನ ವಶಕೆ ಬಾರವೊ ಇ೦ದಿರೆ ಅರಸ ಬ್ರಹ್ಮಾದಿವ೦ದಿತ ನಿನ್ನ ಬ೦ಧಕಶಕುತಿಗೆ ನಮೋ ನಮೋ || ೩ || ಅರಿತು ಅರಿತು ಎನಗರೆಲವವಾದರು ವಿರಕುತಿವಿಷಯದಿ ಬಾರದು ಕರುಣಾಸಾಗರ ನಿನ್ನ ಮರೆಹೊಕ್ಕಲ್ಲದೆ ಮರುಳು ನೀಗುವ ಬಗೆಗಾಣೆನೊ…
Transliteration
Eke mamate kottu danisuvi ranga Ni karunadi enna paliso krushna || pa. || Ninna hambalisade anya vishayagali- Gennanoppisuvudu nitave Mannisi dayadi ni enna palisalu na Ninna nemake pratikulane || 1 || Tanuvu tannadu alla tanu sambandhigalembo Tanuvyaro tanyaro avarige Dhana modalada vishayagala anubava Himdina dehada0tallave || 2 || Imdriyamgalu vishayadi0da tegeyalu Govimda enna vasake baravo Im…