Haridasa Sahitya — Vyasadasa
Eke malagihe hariye
ಏಕೆ ಮಲಗಿಹೆ ಹರಿಯೆ
Composer: Gopala Dasaru · Deity: Hari · Genre: Bhakti
Kannada lyrics
ಏಕೆ ಮಲಗಿಹೆ ಹರಿಯೆ ಏಸು ಆಯಾಸ ಜೋಕೆಮಾಡುವ ಬಿರುದು ಸಾಕಾಯಿತೇನೊ ।।ಪ।। ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ ಅಮೃತಮಥನದಿ ಗಿರಿಯು ಅತಿಭಾರವಾಯ್ತೊ ರಮಣಿಯನು ತರುವಾಗ ರಣರಂಗ ಬಹಳಾಯ್ತೊ ಅಮರರಿಪುವನು ಸೀಳೆ ಕರ ಸೋತಿತೊ ।।೧।। ಆಕಾಶ ಭೇದಿಸಲು ಆ ಕಾಲು ಉಳುಕಿತೊ ಕಾಕುನೃಪರನು ಸೀಳಿ ಕರ ಸೋತಿತೊ ಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊ ಲೋಕಭಾರವ ಇಳುಹಿ ಸಾಕುಸಾಕಾಯ್ತೊ ।।೨।। ಚಪಲೆಯರ ಮೋಹಿಸಲು ಉಪಟಳವು ಬಹಳಾಯ್ತೊ ಅಪವಿತ್ರನಡಗಿಸಲು ಅಧಿಕ ಶ್ರಮವಾಯ್ತೊ ಕೃಪೆಮಾಡಿ ನೋಡಯ್ಯ ಕಣ್ಣು ತೆರೆದು ಎನ್ನಕಡೆ ಕಪಟನಾಟಕ ಶ್ರೀ ಗೋಪಾಲವಿಠಲ ।।೩।।
Transliteration
Eke malagihe hariye Esu ayasa Jokemaduva birudu sakayiteno ||pa|| Tamanodane horadi tapisi mai bevarito Amrutamathanadi giriyu atibaravayto Ramaniyanu taruvaga ranaranga bahalayto Amararipuvanu sile kara sotito ||1|| Akasa bedisalu A kalu ulukito Kakunruparanu sili kara sotito Budeviyanarasi balalikeyu bahalayto Lokabarava iluhi sakusakayto ||2|| Chapaleyara mohisalu upatalavu bahalayto Apavitrana…