Haridasa Sahitya — Vyasadasa
Ekadasi nirnayaanalu samanemanege
ಏಕಾದಶಿ ನಿರ್ಣಯ ಅನಲು
Composer: Vadirajaru · Deity: Vishnu · Genre: Ekadashi
Kannada lyrics
ಏಕಾದಶಿ ನಿರ್ಣಯ ಅನಲು ಸಮನೆ ಮನೆಗೆ ಪೇಳಬಂದ ಅನಾಥಬಂಧು ಹಯವದನ ಗೋವಿಂದ ||pa|| ತನ್ನ ನಂಬಿದವರ ತಾಪತ್ರಯವಳಿದು ಉನ್ನಂತ ಪದವೀವ ದಿನತ್ರಯವನ್ನು ||1|| ವೃದ್ಧಿಮಾತ್ರ ಅರುಣೋದಯದ ಕೆಳಗೆ ಶುದ್ಧಿದಂ ಘಳಿಗೆ ಸಾಕುಯೆಂದು ||2|| ಅತಿವೃದ್ಧಿ ಒಂದುಘಳಿಗೆಯ ಕೆಳಗೆ ವಿಂ ಶತಿ ಫಣಫಲ ದೊಳಗೆ ಶುದ್ಧಿ ಬೇಕೆಂದು ||3|| ತಿಥಿ ವೃದ್ಧಿಆದಾಗೆ ಹತ್ತು ಫಣಪಲ ತಿಥಿಕ್ಷಯದಲ್ಲಿ ಅದರೊಳು ಶುದ್ಧಿ ಬೇಕೆಂದು ||4|| ಇಂದು ದಶಮಿ ಶಾಖವ್ರತವ ಮಾಡಿ ನೀವು ಒಂದು ಬಾರಿ ಭೋಜನ ಮಾಡಿರೊಯೆಂದು ||5|| ತಾಂಬೂಲಚರ್ವಣ ಸಲ್ಲ ಸ್ತ್ರೀಸಂಗ ಹಂಬಲವನ್ನು ನೀವು ಬಿಡಿರಿಯೆಂದು ||6|| ನಾಳೆ ಏಕಾದಶೀ ಉಪವಾಸ ಜಾಗರ ಆಲಸ್ಯ ಮಾಡದೆ ಆಯತಾಕ್ಷಗೆಯೆಂದು ||7|| ಫಲಹ…
Transliteration
Ekadasi nirnayaanalu samanemanege Pela bandaanatha bandhu hayavadana govinda||pa|| Tanna nambidavara tapatrayavalidu Unnanta padaviva dinatrayavannu||1|| Vruddhi matraarunodayada kelage Suddhidangalige sakuyendu||2|| Ativruddhiondugaligeya kelagevim Satipana paladolage suddhibekendu||3|| Tithi vruddhi^^adage hattupana pala Tithikshayadalli adarolu Suddhi bekendu||4|| Indu dasami sakavratava madini…