Haridasa Sahitya — Vyasadasa

Ekadashi Aacharane : Dasara pada by Vijaya Dasaru

ಏಕಾದಶಿ ವ್ರತ ಶೋಧಿಸಿ ಸಾಧಿಸಿ ಏಕಭಕುತಿಯಿಂದ

Composer: Vijaya Dasaru · Deity: Hari · Genre: Ekadashi

Kannada lyrics

ಏಕಾದಶಿ ವ್ರತ ಶೋಧಿಸಿ ಸಾಧಿಸಿ ಏಕಭಕುತಿಯಿಂದ ಮಾಡಿರೊ ಪಾಡಿರೊ | ಲೋಕದೊಳಗೆ ಇದೆ ಬೀರುತಾ ಸಾರುತಾ ಶ್ರೀಕಾಂತನ ವೊಲಿಸಿ || ಪ || ದಶಮಿ ಏಕಾದಶಿ ದ್ವಾದಶಿ ದಿನತ್ರಯ | ವಸುಧಿಯೊಳಗೆ ಮಹಾವ್ರತವೆಂದು ತಿಳಿದು ತ್ರಿ | ದಶರೆಲ್ಲ ಕೈ ಕೊಂಡು ಮಾಡಿದರಂದು ರಂ | ಜಿಸುವ ಸತ್ಕರ್ಮದಲ್ಲಿ | ಬಿಸಜನಾಭನು ಲಕುಮಿಗೆ ಪೇಳಿದ ವ್ರತ | ಹಸನಾಗಿ ಬೊಮ್ಮಗೆ ಅರಹು ಮಾಡಲು ದೇವ | ಋಷಿಗೆ ಅಜನು ಪೇಳಲಾ ಮುನಿ ಬೀರಿದಾ ದಶ ದಿಕ್ಕಿನೊಳಗೊಂದು || 1 || ಉದಯಕಾಲದೆಲೆದ್ದು ಸಂಸಾರಯಾತ್ರೆ ಎಂದು | ಬದಿಯಲ್ಲಿದ್ದವರೆಲ್ಲ ಹರಿದಾಸ ದಾಸಿಯರು ಹೃದಯದೊಳೀಪರಿ ಯೋಚಿಸಿ ಅಜ್ಞಾನ ಒಂದು ಕಡೆಗೆ ನೂಕಿ | ಸದಮಲನಾಗಿ ಸ್ನಾನಾದಿಯ ಮಾಡಿ ಮ ತ್ತದರ ತರುವಾಯ ದೇವತಾ…

Transliteration

Ekadasi vrata sodhisi sadhisi ekabakutiyinda Madiro padiro | Lokadolage ide biruta saruta srikamtana volisi || pa || Dasami ekadasi dvadasi dinatraya | Vasudhiyolage mahavratavendu tilidu tri | Dasarella kai kondu madidarandu ran | Jisuva satkarmadalli | Bisajanabanu lakumige pelida vrata | Hasanagi bommage arahu madalu deva | Rushige ajanu pelala muni birida Dasa dikkinolagondu || 1 || Udayakalad…