Haridasa Sahitya — Vyasadasa

Eetaneega namma devanu

ಈತನೀಗ ನಮ್ಮ ದೇವನು

Composer: Gopala Dasaru · Deity: Krishna / Govinda / Mukunda · Genre: Bhakti

Kannada lyrics

ಈತನೀಗ ನಮ್ಮ ದೇವನು || ಪ || ಪ್ರೀತಿಯಿಂದಲಿ ಸ್ಮರಿಸುವವರ ಪಾತಕಗಳನೆಲ್ಲ ಪರಿಹರಿಪ | |ಅ.ಪ. | | ಅಕ್ರೂರನ ಪ್ರೀತನೀತ | ಚಕ್ರ ಶಂಖ ಧರಿಸಿದಾತ | ನಕ್ರ ಬಾಧೆಯ ತರಿದು ತನ್ನ ಭಕ್ತನನ್ನ ಕಾಯಿದಾತ || ಅಜಮಿಳನ ಸಲಹಿದಾತ | ಪ್ರಜದ ಗೋವು ಕಾಯಿದಾತ | ಭಜಿಸುವವರ ಬಿಡನು ಪ್ರೀತನೀತ | ತ್ರಿಜಗದೊಳಗೆ ಮೆರೆವದಾತ || ಸಕಲಗುಣಪೂರ್ಣ ನೀತ | ಸಕಲ ದೋಶ ದೂರನೀತ | ಸಕಲಾನಂದ ಭರಿತನಿತ | ಭಕುತಿಮಂತ್ರಕೊಲಿವದಾತ || ಅನಾದಿಕಾಲದಿ ಬಾಂಧವನೀತ | ಅನಾದಿ ಕಾಲದವನೀತ | ಆ ನಾರಿ ಮೊರೆಯ ಕೇಳಿ | ಆನಿಮಿಷದೊಳು ಒದಗಿದಾತ | | ಕಮಲಮುಖಿಯ ರಮಣನೀತ | ಕಮಲಾಸನ ಜನಕನೀತ | ಕಮಲಾಕ್ಷ ಗೋಪಾಲ ವಿಠ್ಠಲ ಹೃತ್ ಕಮಲದೊಳು ನಿಲುವದಾತ | |

Transliteration

eetaneega namma devanu || pa || preetiyindali smarisuvavara patakagalanella pariharipa || a.pa. || akrurana preetaneeta | chakra lanka dharisidata | nakra badheya taridu tanna bhaktananna kayidata || 1 || ajamilana salahidata | prajada govu kayidata | bhajisuvavara bidanu preetaneeta | trijagadolage merevadata ||2 || sakalagunapurna neeta | sakala dola duraneeta | sakalananda bharitanita | bhakuti…