Haridasa Sahitya — Vyasadasa

Eduraro guruve samanaro

ಎದುರಾರೊ ಗುರುವೆ ಸಮರಾರೊ

Composer: Vyasarajaru · Deity: Jayateertharu · Genre: Bhakti

Kannada lyrics

ಎದುರಾರೊ ಗುರುವೆ ಸಮರಾರೊ ||pa|| ಮದನ ಗೋಪಾಲನ ಪ್ರಿಯ ಜಯರಾಯ ||a.pa|| ಕಡು ಗರ್ಜಿಸುವ ಕೇಸರಿಯಂತೆ ನಿಮ್ಮ ವಾದ ಗಡಣೆಯ ಕೇಳುತ ನುಡಿ ಮುಂದೋಡದೆ ಗಡ ಗಡ ನಡಗುತ ಮಾಯ್ಗೋಮಾಯ್ಗಳು ಅಡವಿಯೊಳಡಗೋರು ನಿಮ್ಮ ಭೀತಿಯಲಿ||1|| ಕುಟಿಲ ಮತಗಳೆಂಬೋ ಚಟುಲಂಧಕಾರಕ್ಕೆ ಪಟುತರ ತತ್ತ್ವಪ್ರಕಾಶಿಕೆಯೆಂತೆಂಬ ಚಟುಲಾತಪದಿಂದ ಖಂಡಿಸಿ ತೇಜೋ ತ್ಕಟದಿ ಮೆರೆದೆ ಬುಧಕಟಕಾಬ್ಜ ಮಿತ್ರ ||2|| ಅಮಿತ ದ್ವಿಜಾವಳಿ ಕುಮುದಗಳರಳಿಸಿ ವಿಮತರ ಮುಖ ಕಮಲಂಗಳ ಬಾಡಿಸಿ ಸ್ವಮತರ ಹೃತ್ಸಂತಾಪಗಳೋಡಿಸಿ ವಿಮಲ ಸುಕೀರ್ತಿಯ ಪಡೆದೆಯೋ ಚಂದ್ರ ||3|| ವೇದಶಾಸ್ತ್ರಗಳೆಂಬೊ ಶೃಂಗಗಳಿಂದ ಸು ಧಾದಿ ಗ್ರಂಥಗಳೆಂಬೊ ಸ್ತನದಿಂದೊಪ್ಪುತ ತತ್ತ್ವ ಬೋಧನೆಯೆಂಬ ದುಗ್ದ ಶಿಷ್ಯವತ…

Transliteration

Eduraro guruve samanaro || pa || Madanagopalana priya jayaraya || a.pa | Kadugarjisuva kesariyamte nimma vada Gadaneya keluta nudi mundodade Gada gada naduguta maygo maygalu Adaviyo ladagoru nimma bitiyali || 1 || Kutilamatagalembo chatulandhakarakke Patutara tattvaprakasi kentemba Chatula tapadinda kandisi tejot Katadi merede budhakatakabjamitra || 2 || Amitad vijavalikumuda galarasi Vimatara muk…