Haridasa Sahitya — Vyasadasa

Donku balada nayakare

ಡೊಂಕು ಬಾಲದ ನಾಯಕರೆ

Composer: Purandara Dasaru · Deity: Hari · Genre: Philosophy

Kannada lyrics

ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ ।।ಪ।। ಕಣಕ ಕುಟ್ಟೋ ಅಲ್ಲಿಗೆ ಹೋಗಿ ಹಣಿಕಿ ಇಣಿಕಿ ನೋಡುವಿರಿ ಕಣಕ ಕುಟ್ಟೋ ಒನಕೆಲಿ ಬಡಿದರೆ ಕುಂಯಿ ಕುಂಯಿ ರಾಗವ ಹಾಡುವಿರಿ ।।೧।। ಹುಗ್ಗಿ ಮಾಡೋ ಅಲ್ಲಿಗೆ ಹೋಗಿ ತಗ್ಗಿ ಬಗ್ಗಿ ನೋಡುವಿರಿ ಹುಗ್ಗಿ ಮಾಡೋ ಸೌಟಲಿ ಬಡಿದರೆ ಕುಂಯಿ ಕುಂಯಿ ರಾಗವ ಮಾಡುವಿರಿ ।।೨।। ಹಿರೇ ಬೀದಿಯಲಿ ಓಡುವಿರಿ ಕರೇ ಬೂದಿಯಲಿ ಹೊರಳುವಿರಿ ಪುರಂದರವಿಠ್ಠಲರಾಯನ ಈ ಪರಿ ಮರೆತು ಸದಾ ನೀವು ಚರಿಸುವಿರಿ ।।೩।।

Transliteration

Donku balada nayakare nivenutava madidiri ||pa|| Kanaka kutto allige hogi Haniki iniki noduviri Kanaka kutto onakeli badidare Kumyi kumyi ragava haduviri ||1|| Huggi mado allige hogi Taggi baggi noduviri Huggi mado sautali badidare Kumyi kumyi ragava maduviri ||2|| Hire bidiyali oduviri Kare budiyali horaluviri Purandaraviththalarayana I pari Maretu sada nivu carisuviri ||3||